ಸ್ಥಳೀಯ ಸುದ್ದಿ

ಮದ್ಯವ್ಯಸನ ಜೀವನಕ್ಕೆ ಮಾರಕ – ಪಿ.ಕಾಳಿಂಗ ರಾವ್

ಹೂವಿನಹಡಗಲಿ

ತಾಲೂಕು ಕಾನೂನು ಸೇವಾ ಸಮೀತಿ, ತಾಲೂಕು ವಕೀಲರ ಸಂಘ ಮತ್ತು ತಾಲೂಕು ಉಪಕಾರಾಗೃಹ ಹೂವಿನ ಹಡಗಲಿ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಮದ್ಯವ್ಯಸನಿ ವಿರೋಧಿ ದಿನಾಚರಣೆ ಮತ್ತು ಆ್ಯಸಿಡ ಪರಿಣಾಮದ ಕುರಿತು ಕಾನೂನಿನ ಅರಿವು ನೆರವು ಕಾರ್ಯಕ್ರಮವನ್ನು ತಾಲೂಕು ಉಪಕಾರಾಗೃಹದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದ ನಿವೃತ್ತ ಸರ್ಕಾರಿ ಅಭಿಯೋಜಕರಾದ ಶ್ರೀ. ಪಿ.ಕಾಳಿಂಗರಾವ್,
ಮದ್ಯವ್ಯಸನ ಜೀವನಕ್ಕೆ ಅತಿಯಾದ ಕುತ್ತು ತರುವುದರ ಜೋತಗೆ ಜೀವನವನ್ನು ಮಾರಣಾಂತಿಕವಾಗಿ ಮಾಡುತ್ತೆ. ಹೀಗಾಗಿ ಉತ್ತಮ ಆರೋಗ್ಯದಿಂದ ಕುಟುಂಬದ ನಿರ್ವಹಣೆ ಮಾತ್ರ ಸಾಧ್ಯ.
ಆರೋಗ್ಯದ ದೃಷ್ಟಿಯಿಂದ ಮದ್ಯವ್ಯಸನ ಅತ್ಯಂತ ಅಪಾಯಕಾರಿ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಕೆ.ಅಜ್ಜಯ್ಯಾ ಸರ್ಕಾರಿ ಸಹಾಯಕ ಅಭಿಯೋಜಕರು ಹಾಗೂ ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಸುಧಾಕರ ಶಾನುಭೋಗ ಪ್ರಾಸ್ತಾವಿಕವಾಗಿ ಮಾತನಾಡಿದ್ರು.

ಅಧ್ಯಕ್ಷತೆ ವಹಿಸಿದ್ದ ಉಪಕಾರಾಗೃಹದ ಅಧೀಕ್ಷಕರಾದ ಶ್ರೀ ಶರಣಬಸವ ಇನಾಮದಾರ ಮಾತನಾಡಿ, ಮದ್ಯವಸನ ಮನುಷ್ಯನ ಆರ್ಥಿಕ ಪರಿಸ್ಥಿಯನ್ನು ಸಂಕಷ್ಟಕ್ಕೆ ತಳುತ್ತೆ. ಆದ್ದರಿಂದ ಅದರ ದಾಸರಾಗದೇ, ಮದ್ಯವ್ಯಸನದಿಂದ ದೂರ ಉಳಿದು, ಉತ್ತಮ ಬದುಕು ನಿರ್ವಹಿಸಿದಾಗ ಮಾತ್ರ ಉಜ್ವಲ ಭವಿಷ್ಯ. ಜೈಲಿನಿಂದ ಬಿಡುಗಡೆಯಾದ ಪ್ರತಿಯೊಬ್ಬರು ಸಮಾಜದಲ್ಲಿ ಮದ್ಯವ್ಯಸನದ ಚಟಕ್ಕೆ ಬಲಿಯಾಗದೇ ಉತ್ತಮ ಪ್ರಜೆಗಳಾಗಿ ಎಂದ ಸಲಹೆ ನೀಡಿದ್ರು.

ಅತಿಥಿಗಳಾಗಿ ಶ್ರೀ ಅಟವಾಳಗಿ ಕೊಟ್ರೇಶ, ಶ್ರೀ ಡಿಕೆಎಂ ಚನ್ನಬಸವಸ್ವಾಮಿ ಮತ್ತು ಶ್ರೀ ತಿಪ್ಪೆಸ್ವಾಮಿ (ನ್ಯಾಯಾಲಯದ ನಿವೃತ್ತ ಶಿರಸ್ತೆದಾರರು) ಪಾಲ್ಗೊಂಡಿದ್ದರು.

ಅಭಿಷೇಕ ಪಟೇಲ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದ್ರು.

Related Articles

Leave a Reply

Your email address will not be published. Required fields are marked *