ಸ್ಥಳೀಯ ಸುದ್ದಿ
ಮದುವೆ ಮನೆಯಲ್ಲಿ ಮಾಜಿ ಪ್ರಿಯಕರ ಸಾವು
ಬೆಂಗಳೂರು: ಪ್ರೀತಿಸಿದ ಯುವತಿ ಬೆರೊಬ್ಬನ ಜೊತೆ ಮದುವೆ ಆಗುತ್ತಿರುವುದನ್ನು ತಡೆಯಲು ಗಲಾಟೆ ಮಾಡಿದ ಪಾಗಲ್ ಪ್ರೇಮಿಯೊಬ್ಬ, ತನ್ನ ಪ್ರೇಯಸಿಯ ಮದುವೆ ನಡೆಯುತ್ತಿದ್ದ ಮಂಟಪದ ಮುಂದೆಯೇ ಕತ್ತು ಕೊಯ್ದುಕೊಂಡು ಮದುವೆಯನ್ನು ನಿಲ್ಲಿಸಿದ ಘಟನೆ ಮದುವೆ ನಡೆಯುತ್ತಿದ್ದ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಮಣ್ಯದ ಕಲ್ಯಾಣ ಮಂಟಪದಲ್ಲಿ ನಡೆದಿದೆ.
ಹೌದು, ಪ್ರೀತಿಸಿದ ಹುಡುಗಿ ಅಥವಾ ಹುಡುಗ ತನಗೇ ಬೇಕು ಎಂದು ಹುಚ್ಚಾಟ ಮಾಡುವುದನ್ನು ನಾಡು ನೋಡಿದ್ದೇವೆ. ಇನ್ನು ಹಲವು ಪ್ರಕರಣಗಳಲ್ಲಿ ಮದುವೆಯನ್ನು ನಿಲ್ಲಿಸಲಾಗದೇ ಮಮನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳೂ ನಡೆದಿವೆ. ಆದರೆ, ಇಲ್ಲೊಬ್ಬ ಪಾಗಲ್ ಪ್ರೇಮಿ ತಾನು ಪ್ರೀತಿಸಿದ ಹುಡುಗಿ ತನ್ನನ್ನು ನಿರಾಕರಿಸಿ ಬೇರೊಬ್ಬ ಹುಡುಗನ ಜೊತೆ ಮದುವೆ ಆಗಿವುದನ್ನು ಸಹಿಸಿಕೊಳ್ಳದೇ ಮಾಡಬಾರದ ಅವಾಂತರ ಮಾಡಿದ್ದಾನೆ. ಮದುವೆ ನಡೆಯುತ್ತಿದ್ದ ಮಂಟಪಕ್ಕೆ ತೆರಳಿ ತನ್ನ ಪ್ರೇಯಸಿಯ ಮುಂದೆಯೇ ಕತ್ತು ಕೊಯ್ದುಕೊಂಡಿದ್ದಾನೆ.