ಸ್ಥಳೀಯ ಸುದ್ದಿ
ಭೀಕರ ರಸ್ತೆ ಅಪಘಾತ 3 ಮಂದಿ ಸ್ಥಳದಲ್ಲೇ ಸಾವು
ಧಾರವಾಡ
ವೇಗವಾಗಿ ಬಂದ ಕಾರ್ ಬೈಕಗೆ ಡಿಕ್ಕಿ ಹೊಡೆದ ಪರಿಣಾಮ 3 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ವೆಂಕಟಾಪೂರ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿದೆ.
ಘಟನೆಯಲ್ಲಿ ಬೈಕನಲ್ಲಿದ್ದ 3 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅಪಘಾತವಾದ ನಂತರ ಕಾರ್ ಬಿಟ್ಟು ವಾಹನ ಚಾಲಕರು ಪರಾರಿಯಾಗಿದ್ದಾರೆ.
ಮೃತರು ಧಾರವಾಡ ತಾಲೂಕಿನ ಬೋಗೂರು ಗ್ರಾಮದ
ಸುಶಿಲವ್ವ ಹರಿಜನ
ಕಲ್ಲವ್ವ ಹರಿಜನ
ರಾಜು ಎನ್ನುವರಾಗಿದ್ದಾರೆ.
ಅಪಘಾತದ ಕುರಿತಾಗಿ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.