ಸ್ಥಳೀಯ ಸುದ್ದಿ
ಭೀಕರ ರಸ್ತೆ ಅಪಘಾತ ಇಬ್ಬರು ಸಾವು- ಇನ್ನಿಬ್ಬರಿಗೆ ಗಂಭೀರ ಗಾಯ
ಧಾರವಾಡ
vrl ಲಾರಿ ಹಾಗೂ ಅಶೋಕ ಲೈಲ್ಯಾಂಡ್ ಗೂಡ್ಸ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಭೀಕರ ರಸ್ತೆ ಅಪಘಾತವಾಗಿದೆ.
ಈ ಅಪಘಾತದಲ್ಲಿ ಸ್ಥಳದಲ್ಲೇ ವಿಆರಎಲ್ ಚಾಲಕ ಹಾಗೂ ಅಶೋಕ ಲೈಲ್ಯಾಂಡ್ ವಾಹನ ಚಾಲಕ ಮೃತಪಟ್ಡಿದ್ದಾನೆ.
ಇನ್ನಿಬ್ಬರಿಗೆ ಗಂಭೀರವಾಗಿ ಗಾಯಗೊಂಡಿದ್ದು, ಒಬ್ಬನ ಕಾಲು ಕಟ್ ಆಗಿದೆ. ಅವರನ್ನು ಧಾರವಾಡದ ಜಿಲ್ಲಾಸ್ಪತ್ರೆಗೆ ಚಿಕೆತ್ಸೆಗೆ ರವಾನೆ ಮಾಡಲಾಗಿದೆ.
ಧಾರವಾಡ ತಾಲೂಕಿನ ಹಾರೊಬೆಳವಡಿ ಬಳಿ ಈ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಮೃತರಾದವರ ಪೈಕಿ ಸವದತ್ತಿ ತಾಲೂಕಿನ ಉಳ್ಳಿಗೇರಿಯ ಗ್ರಾಮದ ಒಬ್ಬರು ಇದ್ದು, ವಿಆರಎಲ್ ಲಾರಿ ಚಾಲಕನ ಮಾಹಿತಿ ತಿಳಿದು ಬಂದಿಲ್ಲಾ.
ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.