ಭಾರತದ ಕೀರ್ತಿ ಬೆಳಗಿಸಿದ ಕ್ರೀಡಾಪಟುಗಳು
ಧಾರವಾಡ
ಕರ್ನಾಟಕದ ಕ್ರೀಡಾಪಟುಗಳು ನೇಪಾಳದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿ, ಕರುನಾಡಿನ ನಮಗೆಲ್ಲರಿಗೂ ಹೆಮ್ಮೆ ತಂದಿದ್ದಾರೆ. ಸೌಥ್ ಏಷಿಯನ್ ರೋಪ್
ಸ್ಕಿಪ್ಪಿಂಗ್ ಸ್ಫರ್ಧೆ ನೇಪಾಳದ ಕಟ್ಮಂಡುವಿನಲ್ಲಿ ನಡೆದಿತ್ತು. ಈ ಸ್ಫರ್ಧೆಯಲ್ಲಿ ಕರ್ನಾಟಕದ 22 ಮಂದಿ ಕ್ರೀಡಾಪಟುಗಳು ಕೊರೆವ ಚಳಿಯಲ್ಲಿಯೂ ರೋಪ್ ಸ್ಕಿಪ್ಪಿಂಗ್ ಸಾಹಸ ಪ್ರದರ್ಶನ ಮಾಡಿ
ಚಿನ್ನ- ಬೆಳ್ಳಿ ಪದಕ ಗೆದ್ದಿದ್ದಾರೆ.
ಇದರಲ್ಲಿ ಧಾರವಾಡದ ಮುತ್ತಣ್ಣ ಪೊಲೀಸ್ ಮಕ್ಕಳ ಶಾಲೆಯ 3 ಮಂದಿ ವಿದ್ಯಾರ್ಥಿಗಳು ಇದ್ದಾರೆ. ಪ್ರಮೋದ ರೋಣದ ಅವರು ಈ ಕ್ರೀಡಾಪಟುಗಳಿಗೆ ತರಬೇತಿ ಕೊಟ್ಟಿದ್ದು,
ರೋಪ್ ಸ್ಕಿಪ್ಪಿಂಗ್ ಸಂಸ್ಥೆ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯರಾದ ಹನುಮಂತ ನಿರಾಣಿ, ಮತ್ತು ಇನ್ನೊಬ್ಬ ಪರಿಷತ್ ಸದಸ್ಯ ಎಸ್.ವಿ.ಸಂಕನೂರು ಕ್ರೀಡಾಪಟುಗಳಿಗೆ ಸನ್ಮಾನಿಸಿ ಗೌರವಿಸಿದ್ರು.
ಹೀಗೆ ಪ್ರಶಸ್ತಿ ಪಡೆದಿರುವ ಒಟ್ಟು 10 ಕ್ರೀಡಾಪಟುಗಳು ದೆಹಲಿಯಲ್ಲಿ ಅಕ್ಟೋಬರ 17 ರಿಂದ 19 ರವರೆಗೆ ನಡೆಯಲಿರುವ ರಾಷ್ಟ್ರೀಯ ಮಟ್ಟದ ರೋಪ ಸ್ಕಿಪ್ಪಿಂಗ್ ಸ್ಫರ್ಧೆಯಲ್ಲಿ ಕೂಡ ಭಾಗಿಯಾಗುತ್ತಿದ್ದು,
ಪ್ರಶಸ್ತಿ ಗೆದ್ದು ಬರ್ತಾರೆ ಎನ್ನುವ ವಿಶ್ವಾಸವನ್ನು ಧಾರವಾಡ ಎಸ್ಪಿ ಲೋಕೆಶ ಜಗಲಾಸರ್ ವ್ಯಕ್ತ ಪಡಿಸಿದ್ದಾರೆ.