ಬ್ರಹ್ಮಪುರಿ ಹೆಬ್ಬಳ್ಳಿ ಉತ್ಸವ 2023- ಯಶಸ್ವಿ
ಧಾರವಾಡ
ಧಾರವಾಡ ತಾಲೂಕಿನ ಸುಕ್ಷೇತ್ರ ಹೆಬ್ಬಳ್ಳಿ ಗ್ರಾಮದಲ್ಲಿ ಬ್ರಹ್ಮಪುರಿ ಸಾಂಸ್ಕೃತಿಕ ಬಳಗ ಹಾಗೂ ಗ್ರಾಮ ಪಂಚಾಯತ್ ಹೆಬ್ಬಳ್ಳಿ ಮತ್ತು ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ಅಮ್ಮಿನಭಾವಿ ಇವರ ಸಹಯೋಗದಲ್ಲಿ ಬ್ರಹ್ಮಪುರಿ (ಹೆಬ್ಬಳ್ಳಿ) ಉತ್ಸವ 2023 ಮತ್ತು ಹೆಬ್ಬಳ್ಳಿಯ ಆಶುಕವಿ ಭಜನಾಕಾರ ದಿವಂಗತ ಶ್ರೀ ಚಂದ್ರಪ್ಪ ಛಲವಾದಿ ಅವರ “ಹುಲಿಯು ಹುಟ್ಟಿತ್ತು ಕಿತ್ತೂರ ನಾಡಾಗ” ಅನುಭಾವದ ಪದಗಳ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಗುರು ದತ್ತಾವಧೂತ ಮಹಾರಾಜರು ಬ್ರಹ್ಮ ಚೈತನ್ಯ ಮಂದಿರ ಹೆಬ್ಬಳ್ಳಿ
ಶ್ರೀ ಯೋಗಾನಂದ ಮಹಾಸ್ವಾಮಿಗಳು ಹಾಗೂ ಮಾಜಿ ಶಾಸಕರಾದ ಶ್ರೀಮತಿ ಸೀಮಾ ಅಶೋಕ ಮಸೂತಿ ಮತ್ತು ಜನಜಾಗೃತಿ ಸಂಘದ ಅಧ್ಯಕ್ಷರಾದ ಶ್ರೀ ಬಸವರಾಜ ಕೊರವರ ಉತ್ತರ ಕರ್ನಾಟಕದ ಚಲನಚಿತ್ರ ಮಂಡಳಿ ಕಾರ್ಯದರ್ಶಿಗಳಾದ ಮಂಜುನಾಥ ಹಗೇದಾರ ವೈಶುದೀಪ ಪೌಂಡೇಶನ್ ಕಾರ್ಯಾಧ್ಯಕ್ಷರಾದ ಶ್ರೀಮತಿ ಶಿವಲೀಲಾ ಕುಲಕರ್ಣಿ ಖ್ಯಾತ ವೈದ್ಯರಾದ ಶ್ರೀ ವಿ.ಎಂ.ದೇಶಪಾಂಡೆ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ತಮ್ಮಾಜಿರಾವ ತಲವಾಯಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಲಿಂಗರಾಜ ಅಂಗಡಿ ಹಾಗೂ ಹಲವು ಗಣ್ಯರು ಮತ್ತು ಊರಿನ ಗುರು ಹಿರಿಯರು, ಅಣ್ಣ ತಮ್ಮಂದಿರು ಅಕ್ಕ ತಂಗಿಯರು ಮುದ್ದು ಮಕ್ಕಳು ಉಪಸ್ಥಿತರಿದ್ದರು.