ಬೈಕ್ ಮೇಲೆ ಪೊಲೀಸ್ ಅಂತಾ ಬರೆದು ಚೈನ್ ಸ್ನ್ಯಾಚಿಂಗ್ ಮಾಡ್ತಾರೆ ಎಚ್ಚರಿಕೆ
ಧಾರವಾಡ
ಇತ್ತೀಚೆಗೆ ಧಾರವಾಡ ನಗರದಲ್ಲಿ ಚೈನ್ ಸ್ನ್ಯಾಚಿಂಗ್ ಪ್ರಕರಣಗಳು ಕಡಿಮೆಯಾಗಿದ್ದವು.
ಇದರಿಂದ ಸಾರ್ವಜನಿಕರು ನೆಮ್ಮದಿಯಿಂದ ಇದ್ದರು.
ಆದ್ರೆ ಇದೀಗ ಮತ್ತೆ ಹಾಡುಹಗಲೇ ಬೆಳ್ಳಂಬೆಳ್ಳಿಗ್ಗೆ ವಾಕಿಂಗ್ ಹೋಗುವವರ ಸರಗಳ್ಳತನ ಪ್ರಕರಣಗಳು ನಡೆಯುತ್ತಿವೆ.
ಇದಕ್ಕೆ ಉದಾಹರಣೆ ಡಿಸೆಂಬರ್ 21 ರಂದು ಬೆಳ್ಳಿಗ್ಗೆ ನಡೆದ ಸರಗಳ್ಳತನ ಪ್ರಕರಣ.
ಧಾರವಾಡದ ಲಿಂಗಾಯತ್ ಭವನದ ಮುಂದೆ ಬೈಕ್ ಒಂದನ್ನು ಕದ್ದಿರುವ ಈ ಗ್ಯಾಂಗ್ ಪೊಲೀಸ್ ಅಂತಾ ಬೋರ್ಡ ಹಾಕಿಕೊಂಡಿದ್ದಾರೆ.
ಹೊಸಯಲ್ಲಾಪೂರದ ವೇದಾ ಬಿಜಾಪೂರ ಎನ್ನುವ ಮಹಿಳೆಯ 35 ಗ್ರಾಂ ಬಂಗಾರ ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಪ್ರಕರಣ ಶಹರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇದೇ ರೀತಿ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಶ್ರೀ ನಗರದಲ್ಲಿಯೂ ಇದೇ ಗ್ಯಾಂಗ್ 45 ಗ್ರಾಂ ಬಂಗಾರ ದೋಚಿಕೊಂಡು ಪರಾರಿಯಾಗಿದ್ದಾರೆ.
ಧಾರವಾಡದ ಹೊಸಯಲ್ಲಾಪೂರದ ಬಡಾವಣೆಯಲ್ಲಿ ಬೈಕ್ ಮೇಲೆ ಪೊಲೀಸ್ ಅಂತಾ ಬರೆದುಕೊಂಡಿದ್ದ ಇಬ್ಬರು ಚೈನ್ ಸ್ನ್ಯಾಚಿಂಗ್ ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿ ಹಾಗೂ ಉಪನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣಗಳು ನಡೆದಿವೆ.