ಸ್ಥಳೀಯ ಸುದ್ದಿ
ಬಿಜೆಪಿ ಶಾಸಕನಿಂದ ಹೊಸ ರೂಲ್ಸ್
ಧಾರವಾಡ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಕೇಂದ್ರದಲ್ಲಿಯೂ ಅಧಿಕಾರದಲ್ಲಿದೆ. ಆದ್ರೆ ಕರ್ನಾಟಕದ ಶಾಸಕರೊಬ್ಬರು ಹೊಸ ರೂಲ್ಸ್ ಮಾಡಿದ್ದು ಭಾರಿ ಚರ್ಚೆಗೆ ಹಾಗೂ ವಿವಾದಕ್ಕೆ ಕಾರಣವಾಗಿದೆ.
ಉತ್ತರ ಕರ್ನಾಟಕದ ಗದಗ ಜಿಲ್ಲೆಯ ಶಿರಹಟ್ಟಿ ಶಾಸಕ ರಾಮಪ್ಪ ಲಮಾಣಿ ಈ ರೀತಿ ಹೊಸ ರೂಲ್ಸ್ ಮಾಡಿದ್ದಾರೆ. ಅದೇನಪ್ಪಾ ಅಂದ್ರೆ ನನ್ನ ಮತಕ್ಷೇತ್ತದ ವ್ಯಾಪ್ತಿಯಲ್ಲಿರುವ ವ್ಯಕ್ತಿ ನನಗೆ ಪರಿಚಯ. ಅವರು ಬಳಸುವ ಬೊಲೆರೋ ವಾಹನವನ್ನು ಯಾರು ತಡೆಯಬಾರದು. ಹಾಗೂ ತೊಂದ್ರೆ ಕೊಡಬಾರದೆಂದು ಹೇಳುವ ಮೂಲಕ ಶಾಸಕರು ಲೆಟರ್ ಹೆಡ್ ಇದೀಗ ವೈರಲ್ ಆಗಿದೆ.
ಅಷ್ಟಕ್ಕೂ ಬೊಲೆರೋ ವಾಹನದಲ್ಲಿ ಅಂತಹದೇನಿದೆ ಎನ್ನುವುದು ಇದೀಗ ಗದಗ ಜಿಲ್ಲೆ ಹಾಗೂ ಉತ್ತರ ಕರ್ನಾಟಕದಾದ್ಯಂತ ಚರ್ಚೆಗೆ ಕಾರಣವಾಗಿದೆ.