ಸ್ಥಳೀಯ ಸುದ್ದಿ
ಬಸವರಾಜ ಕೊರವರ್, ತವನಪ್ಪ ಅಷ್ಟಗಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಕೆ
ಧಾರವಾಡ
ಇಂದು ಧಾರವಾಡ ಗ್ರಾಮೀಣ 71ಮತ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಜೋಡೆತ್ತುಗಳು ತವನಪ್ಪಾ ಅಷ್ಟಗಿ ಮತ್ತು ಬಸವರಾಜ್ ಕೊರವರ್ ಅವರು ಸಾವಿರಾರು ಜನರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆಗೆ ತೆರಳಿದರು.
ಸಾವಿರಾರು ಸಂಖ್ಯೆಯಲ್ಲಿ 71ಧಾರವಾಡ ವಿಧಾನಸಭಾ ಮತಕ್ಷೇತ್ರದಿಂದ ಭಾಗವಹಿಸಿದ ಪ್ರೀತಿಯ ಜನತೆಗೆ ನಾವು ಚಿರಋಣಿ ನೀವುಗಳು ತೋರಿದ ಪ್ರೀತಿ, ವಿಶ್ವಾಸಕ್ಕೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಆಶೀರ್ವಾದವೇ ನಮಗೆ ಶ್ರೀರಕ್ಷೆ. ಬಡವರ ಮಕ್ಕಳು ವಿಧಾನಸಭೆಗೆ ಕಳಿಸಲು ನಿಮ್ಮ ಅತ್ಯಮೂಲ್ಯವಾದ ಪ್ರತಿಯೊಂದು ಮತವು ನಮಗೆ ಅತೀ ಅವಶ್ಯಕ ಎಂದರು.