ಸ್ಥಳೀಯ ಸುದ್ದಿ
ಬಂಡಾಯ ತಣಿಸಲು ಮುಂದಾದ ಬಿಜೆಪಿ ಹೈಕಮಾಂಡನಿಂದ ಆಣೆ ಪ್ರಮಾಣ
ಧಾರವಾಡ
ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಒಟ್ಟು ಬಿಜೆಪಿ ಅಭ್ಯರ್ಥಿಗಳ ಪಟ್ಟಿ 4 ಕ್ಕಿಂತ ಹೆಚ್ಚಿದ್ದು, ಈ ಬಂಡಾಯವನ್ನು ತಣಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ.
ಬಿಜೆಪಿ ಪಕ್ಷದ ಕಚೇರಿಯಲ್ಲಿ ಆಣೆ ಪ್ರಮಾಣ ಮಾಡಿಸುವ ಮೂಲಕ ಬಂಡಾಯ ತಣಿಸಲು ಪಾರ್ಟಿ ನಾಯಕರು ಯಶಸ್ವಿಯಾಗಿದ್ದಾರೆ.
ಧಾರವಾಡ 71 ಬಿಜೆಪಿ ಉಸ್ತುವಾರಿ ಅಮೀತ್ ಶಾ ಅವರ ಸಮ್ಮುಖದಲ್ಲಿ ಹಾಲಿ ಶಾಸಕ ಅಮೃತ ದೇಸಾಯಿ, ಆಕಾಂಕ್ಷಿಗಳಾದ ಸವಿತಾ ಅಮರಶೆಟ್ಟಿ, ತವನಪ್ಪ ಅಷ್ಟಗಿ, ಮಾಜಿ ಶಾಸಕಿ ಸೀಮಾ ಮಸೂತಿ, ಈ ಆಣೆ ಪ್ರಮಾಣದಲ್ಲಿ ಭಾಗಿಯಾಗಿದ್ದರು.