ಪ್ರದೀಪ ಶೆಟ್ಟರ ಅವರಿಗೆ ಪ್ರಯಾಸದ ಗೆಲುವು
ಧಾರವಾಡ
ಸ್ಥಳೀಯ ಸಂಸ್ಥೆಯ 2 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೊಂದಾಣಿಕೆ ಅಸ್ತ್ರದಿಂದ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹಾಕಿದ್ರೂ, ಕೂಡ ಪ್ರದೀಪ ಶೆಟ್ಟರ ಪಕ್ಷೇತರ ಅಭ್ಯರ್ಥಿಯ ತೀವ್ರ ಪೈಪೋಟಿಯ ನಡುವೆ, ಪ್ರಯಾಸ ಗೆಲುವು ಸಾಧಿಸಿದ್ರು.
ಒಟ್ಟು 7450 ಮತಗಳಲ್ಲಿ 7080 ಮತಗಳು ಸಿಂಧು ಆಗಿದ್ದು, ಇದರಲ್ಲಿ 370 ಮತಗಳಿ ಅಸಿಂಧು ಆಗಿವೆ.
ಹೀಗಾಗಿ ಪ್ರದೀಪ ಶೆಟ್ಟರ ಅವರು 2360 ಮತಗಳನ್ನು ಪಡೆದು ಗೆಲುವು ಸಾಧಿಸಿದ್ರು.
ಇವರಿಗೆ ಪ್ರತಿಸ್ಪರ್ಧಿ ಆದ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಪಾಟೀಲ್ 1217 ಮತಗಳನ್ನು ಪಡೆದು, ಪಕ್ಷೇತರ ಅಭ್ಯರ್ಥಿಗಳ ಕಡೆಗಣನೆ ಯಾವುದೇ ಚುನಾವಣೆಯಲ್ಲಿ ಸರಿಯಲ್ಲಾ ಎನ್ನುವ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ಗೆಲುವಿನ ನಂತರ ಮಾತನಾಡಿದ ಪ್ರದೀಪ ಶೆಟ್ಟರ,
ನನ್ನ ಗೆಲುವಿಗೆ ಕಾರಣರಾದ ಸಿಎಂ,ಸಚಿವರು, ಶಾಸಕರು ಹಾಗೂ ಸ್ಥಳಿಯ ಸಂಸ್ಥೆಗಳ ಸದಸ್ಯರಿಗೆ ಧನ್ಯವಾದ.
ನನಗೆ ಕಡಿಮ ಮತ ಯಾಕೆ ಬಂದಿವೆ ಎಂದು ಪಕ್ಷದಲ್ಲಿ ಕುಳಿತು ಚರ್ಚೆ ಮಾಡ್ತೆವೆ.
ಆದರೆ ನಾನೂ ಕೂಡಾ ಪ್ರಥಮ ಪ್ರಾಶಸ್ತ್ಯ ಮತಗಳಿಂದ ಗೆದ್ದಿದ್ದೆನೆ.
ನಮ್ಮ ಪಕ್ಷದ ಮತ ಎಲ್ಲಿ ವಿಭಜನೆಯಾಗಿವೆ ಎಂದು ಚರ್ಚೆ ಮಾಡ್ತೆವೆ.
ನನ್ನ ಕ್ಷೇತ್ರದ ಸದಸ್ಯರ ಎಲ್ಲ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡ್ತೆನೆ.
ಎಲ್ಲರಿಗೆ ನಾನು ಋಣಿ ಎಂದರು