ಸ್ಥಳೀಯ ಸುದ್ದಿ
ಪ್ರತಿಭಟನಾ ನಿರತರೊಂದಿಗೆ ಮೇಯರ್ ಮಾತುಕತೆ
ಧಾರವಾಡ
ಜಲಮಂಡಳಿ ಗುತ್ತಿಗೆ ಆಧಾರಿತ ಕಾರ್ಮಿಕರು ವೇತನ ಹಾಗೂ ಪುನರ್ ನೇಮಕಾತಿಯ ಕುರಿತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ಕೇಂದ್ರ ಕಚೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ರವರ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದ್ದು, ಮೇಯರ್ ಈರೇಶ ಅಂಚಟಗೇರಿ ರವರು ಭೇಟಿ ನೀಡಿ, ಧರಣಿಯನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದ್ರು.
ಈಗಾಗಲೇ ಕಾರ್ಯ ನಿರ್ವಹಿಸಿದ ಕಾರ್ಮಿಕರ 7 ತಿಂಗಳ ವೇತನವನ್ನು ಅತೀ ಶೀಘ್ರದಲ್ಲಿ ಸಂಬಂಧಪಟ್ಟ ಸಂಸ್ಥೆಯ ಕಡೆಯಿಂದ ಕೊಡಿಸುವುದಾಗಿ ಹಾಗೂ 50 ಕಾರ್ಮಿಕರನ್ನು ಸದ್ಯಕ್ಕೆ ಪುನರ್ ನೇಮಕಗೊಳಿಸಿ, ಮುಂದಿನ ಹಂತಗಳಲ್ಲಿ ಅವಶ್ಯಕತೆಗೆ ತಕ್ಕಂತೆ ಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಅಧಿಕಾರಿಗಳಾದ ಆರ್.ಎಂ. ಕುಲಕರ್ಣಿ ರವರು, ಗಂಗಾಧರ ರವರು ಹಾಗೂ ಜಲಮಂಡಳಿಯ ಕಾರ್ಮಿಕರು ಉಪಸ್ಥಿತರಿದ್ದರು.