ಸ್ಥಳೀಯ ಸುದ್ದಿ

ಪೇಢಾನಗರಿಯಲ್ಲಿ ಆಕಾಶ+ ಬೈಜೂಸ್ ಕ್ಲಾಸರೂಂ ಸೆಂಟರ್ ಆರಂಭ

ಧಾರವಾಡ

ದೇಶದಲ್ಲಿ ಪರೀಕ್ಷಾ ಸಿದ್ದತೆಗಳ ಸೇವಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಆಕಾಶ+ ಬೈಜೂಸ್ 24 ರಾಜ್ಯಗಳಲ್ಲಿ 280 ಕ್ಕೂ ಹೆಚ್ಚು ತರಬೇತಿ ಕೇಂದ್ರಗಳನ್ನು ಹೊಂದಿದೆ.

ವಾರ್ಷಿಕ 3.33 ಲಕ್ಷ ವಿದ್ಯಾರ್ಥಿಗಳಿಗೆ ಈ ತರಬೇತಿ ಕೊಡಲಾಗುತ್ತಿದೆ.

ಧಾರವಾಡದ ತರಬೇತಿ ‌ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ಹಾಗೂ ಎಂಜಿನೀಯರಿಂಗ್ ಪ್ರವೇಶ ಪರೀಕ್ಷೆಗಳಿಗೆ ತಯಾರಿ ನಡೆಸಲು ತರಬೇತಿ ನೀಡಲಾಗುತ್ತಿದೆ

ಧಾರವಾಡದಲ್ಲಿ 5 ಕ್ಲಾಸರೂಮಗಳಿದ್ದು, 500 ವಿದ್ಯಾರ್ಥಿಗಳಿಗೆ ತರಬೇತಿ ಸೌಲಭ್ಯ ಕಲ್ಪಿಸಲು ಅವಕಾಶವಿದೆ.

ಧಾರವಾಡದ ಟೋಲನಾಕಾ ಸಮೀಪ ಈ ಹೊಸ ಸೆಂಟರ್ ಇದ್ದು, ಪ್ರಾದೇಶಿಕ ನಿರ್ದೇಶಕ ಧೀರಜ್ ಕುಮಾರ್ ಮಿಶ್ರಾ ಕಂಪನಿಯ ಅಧಿಕಾರಿಗಳ ಸಮ್ಮುಖದಲ್ಲಿ ಉದ್ಘಾಟನೆ ಮಾಡಿದ್ರು.

ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ಆಕಾಶ ಚೌಧರಿ ಮಾತನಾಡಿ, ಧಾರವಾಡದಲ್ಲಿ ವಿದ್ಯಾರ್ಥಿಗಳಿಗೆ ಇದೊಂದು‌ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಪಡೆಯಲು ಸುವರ್ಣಾವಕಾಶ ಎಂದರು.

Related Articles

Leave a Reply

Your email address will not be published. Required fields are marked *