ಪುಲ್ ಕಂಟ್ರೋಲ್ ಗೆ ಬಂದ ಎಸ್ ಡಿ ಎಂ ಕೊರೊನಾ ಕೇಸ್
ಧಾರವಾಡ.
ಎಸ್.ಡಿ.ಎಂ ಮೆಡಿಕಲ್ ಕಾಲೇಜ್ ಕೊರೊನಾ ಕೇಸಗಳನ್ನು ಖುದ್ದು ಸಿಎಂ ಬೊಮ್ಮಾಯಿ ನೇತೃತ್ವವಹಿಸಿ ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಜೋತೆಗೆ ನಿರಂತರ ಸಂಪರ್ಕದಲ್ಲಿ ಇದ್ದು. ಕೊರೊನಾ ನಿಯಂತ್ರಣ ಮಾಡಿದ್ದಾರೆ.
ಇದರಿಂದ ಧಾರವಾಡ ಜಿಲ್ಲಾಡಳಿತ
ನೆಮ್ಮದಿಯ ನಿಟ್ಟುಸಿರು ಬಿಟ್ಟಂತೆ ಆಗಿದೆ.
ಇನ್ನು ಧಾರವಾಡ ಜಿಲ್ಲೆಯ ಜನರಿಗಿದ್ದ ಆತಂಕವೂ ಕೂಡ ದೂರ ಆಗಿದೆ.
ಎಸ್. ಡಿ.ಎಂ ಕೊರೊನಾ ಕೇಸಗಳ ಹೆಚ್ಚಳದಿಂದ
ಶೇ.16 ರಷ್ಟಿದ್ದ ಪಾಸಿಟಿವಿಟಿ ದರ, ಇದೀಗ ಏಕಾಏಕಿ ಶೇ.1.12 ಕ್ಕೆ ಇಳಿಕೆಯಾಗಿದೆ.
3973 ಎಸ್.ಡಿ.ಎಂನ ಮೆಡಿಕಲ್ ಕಾಲೇಜು ಹಾಗೂ ಸಿಬ್ಬಂದಿಯ ಕೊವಿಡ್ ರಿಪೋರ್ಟ ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿದ್ದು,
ಇದರಲ್ಲಿ 306 ಜನರಲ್ಲಿ ಮಾತ್ರ ಕೋವಿಡ್ ಪತ್ತೆಯಾಗಿದೆ.
ಶನಿವಾರದ 2217 ವ್ಯಕ್ತಿಗಳ ತಪಾಸಣೆಗಳಲ್ಲಿ 25 ಜನರಿಗೆ ಕೋವಿಡ್ ದೃಢವಾಗಿದೆ*
3 ದಿನಗಳ ಹಿಂದೆ ಒಟ್ಟು ತಪಾಸಣೆ ಮಾಡಿದ್ದ
1756 ಜನರಲ್ಲಿ 281 ಜನರಲ್ಲಿ ಸೋಂಕು ಪತ್ತೆಯಾಗಿತ್ತು.
ಇದರಿಂದ ಪಾಸಿಟಿವಿಟಿ ದರ ಶೇ.16 ಕ್ಕೇರಿತ್ತು.
ನೆಮ್ಮದಿಯ ವಿಚಾರವೆಂದ್ರೆ ಜಿಲ್ಲಾಡಳಿತ ಕೈಗೊಂಡಿದ್ದ ಕಠಿಣ ಕ್ರಮಗಳಿಂದ
ರೋಗಿಗಳು,ಅವರ ಆರೈಕೆದಾರರಲ್ಲಿ ಈ ಸೋಂಕು ವ್ಯಾಪಿಸಿಲ್ಲ.
ಇದರ ಜೊತೆಗೆನೆ ಜಿಲ್ಲಾಡಳಿತ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸರು,ಎಸ್ ಡಿ ಎಂ ಆಡಳಿತ ಮಂಡಳಿ ಬಿಗಿಕ್ರಮಗಳು ಮುಂದುವರಿಕೆ ಮಾಡಲಾಗಿದೆ.