ಸ್ಥಳೀಯ ಸುದ್ದಿ

ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರುಗಳ ವಿರೋಧ

ಧಾರವಾಡ

ಇಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ಕೇಂದ್ರ ಕಚೇರಿಯ ಆವರಣದಲ್ಲಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಪಾಲಿಕೆಯ ಸದಸ್ಯರು ಮೇಯರ್ ಅಂಚಟಗೇರಿ ಅವರಿಗೆ ವಿರೋಧ ವ್ಯಕ್ತಪಡಿಸಿದ್ರು.

ಈ ಬಗ್ಗೆ ಪ್ರತಿಕ್ರೀಯಿಸಿದ ಮೇಯರ್, ಅವಳಿನಗರದ ಸಮಗ್ರ ಅಭಿವೃದ್ಧಿಗಾಗಿ ಇರುವ ವಿಷಯ ಪಟ್ಟಿಯಲ್ಲಿರುವ ವಿಷಯಗಳನ್ನು ಮಂಡಿಸದೆ, ಕೇವಲ ಒಂದು ವಿಷಯವನ್ನು ಮುಂದಿಟ್ಟುಕೊಂಡು ಮಹಾಪೌರರಿಗೆ ಸಭಾಭವನಕ್ಕೆ ಆಗಮಿಸಲು, ಸಭೆಯನ್ನು ನಡೆಸಲು, ಅಡ್ಡಿಪಡಿಸಿದರು.

ಅವಳಿನಗರದ ನಾಗರಿಕರಿಂದ ಚುನಾಯಿಸಲ್ಪಟ್ಟು, ನಾಗರಿಕರ ಹಿತದೃಷ್ಟಿಯ ದೆಸೆಯಲ್ಲಿ ಚರ್ಚಿಸುವ ಬದಲಾಗಿ, ಸಭೆ ನಡೆಸದೆ ಸಭೆಗೆ, ಹಾಗೂ ಮಹಾಪೌರರಿಗೆ ಅಗೌರವ ತೋರಿಸಿ, ರಾಜಕೀಯದ ನಾಟಕೀಯ ದುರುದ್ದೇಶದಿಂದ ಪಾಲಿಕೆಯ ಕಚೇರಿಯ ಅವರಣದಲ್ಲಿಯೂ ಸಹ ಪ್ರತಿಭಟನೆ ನಡೆಸಿದ್ದಾರೆ.

ವಿರೋಧ ಪಕ್ಷದ ಸದಸ್ಯರ ನಡವಳಿಕೆಯಿಂದ ನನಗೆ ಅಸಮಾಧಾನವಾಗಿದೆ ಎಂದು ಮೇಯರ್ ಬೇಸರ ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *