ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ
ಪಾಲಿಕೆ ಸದಸ್ಯಇಮ್ರಾನ್ ಎಲಿಗಾರಗೆ ಮಾತೃವಿಯೋಗ!
ಹುಬ್ಬಳ್ಳಿ
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ನೂತನ ಸದಸ್ಯ ಹಾಗೂ ಧಾರವಾಢ ಜಿಲ್ಲಾ ಕಾಂಗ್ರೇಸ್ ಯುವ ಘಟಕದ ಅಧ್ಯಕ್ಷರಾದ ಇಂಬ್ರಾಣ ಎಲಿಗಾರ ಅವರ ತಾಯಿ ಶ್ರೀಮತಿ ಮೆಹಬೂಬ್ಬಿ ಎಲಿಗಾರ (58) ಇಂದು ನಿಧನರಾಗಿದ್ದಾರೆ.
ಬಹು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಕ್ರಮೇಣ ಚೇತರಿಸಿಕೊಳ್ಳುತ್ತಿದ್ದ ಶ್ರೀ ಮತಿ ಮೆಹಬೂಬಿ ಎಲಿಗಾರ ಅವರ ಇಂದು ಎಕಾಏಕಿ ಆರೋಗ್ಯದಲ್ಲಿ ಮತ್ತಷ್ಟು ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಇಹ ಲೋಕ ತೈಜಿಸಿದ್ದಾರೆ.
ಅಪಾರ ಬಂಧು ಬಳಗವನ್ನು ಅಗಲಿದ ಶ್ರೀ ಮತಿ ಮೆಹಬೂಬ್ಬಿ ಎಲಿಗಾರ ಅವರ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.
ಮೃತರ ಅಂತ್ಯಕ್ರೀಯೆಯನ್ನು ಇಂದು ಸಂಜೆ 6 ಘಂಟೆಗೆ ಹಳೆ ಹುಬ್ಬಳ್ಳಿಯ ಆನಂದ ನಗರದ ಖಬರಸ್ಥಾನ ನಲ್ಲಿ ಜರುಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.