ಪರೀಕ್ಷೆ ಬರೆದವನು ಬರೆಸಿದವನು ಇಬ್ಬರಿಗೂ ದಂಡ ಸಹೀತ ಶಿಕ್ಷೆ ನೀಡಿದ ನ್ಯಾಯಾಲಯ
ಹುಬ್ಬಳ್ಳಿ
2007 ನೇ ಸಾಲಿನಲ್ಲಿ ಧಾರವಾಡದ ಎಸ್ .ಡಿ.ಎಂ ಎಂಜಿನೀಯರಿಂಗ್ ಕಾಲೇಜಿನಲ್ಲಿ ನಡೆದ ಪರೀಕ್ಷೆಯಲ್ಲಿ ಅಸಲಿ ಅಭ್ಯರ್ಥಿ ಬದಲಿಗೆ ನಕಲಿ ಅಭ್ಯರ್ಥಿ ಪರೀಕ್ಷೆ ಬರೆದಿದ್ದರು.
*ಧಾರವಾಡ ಮೂಲದ ಜಾಫರ್ ತಡಕೋಡ ಗ್ರಾಮಿಣ ಶಾಸಕರ ಹೆಸರನ್ನೇ ಬಂಡವಾಳ ಮಾಡಿಕೊಂಡದ್ದ ಎನ್ನಲಾಗಿದೆ*
ಈತ ಎಂಜಿನೀಯರಿಂಗ್ ವಿದ್ಯಾರ್ಥಿಯಾಗಿದ್ದಾಗ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಪ್ರಶಾಂತ ಬಡಿಗೇರ ಎನ್ನುವನನ್ನು ಕರೆಯಿಸಿ ಪರೀಕ್ಷೆ ಬರೆಸಿದ್ದ.
*3 ನೇ ಸೆಮಿಸ್ಟರ್ ಹಾಗೂ 4 ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಈ ಗೋಲ್ಮಾಲ್ ನಡೆದಿತ್ತು. *
ವಿಶ್ವೇಶ್ವರಯ್ಯ ಟೆಕ್ನಾಲಜಿ ಇನ್ಸ್ಟಿಟ್ಯೂಟ್ ಯುನಿರ್ವಸಿಟಿ ಅಧಿಕಾರಿಗಳು ಏಕಾಏಕಿ ಪರೀಕ್ಷೆ ಪರಿಶೀಲನೆ ಮಾಡಿದ್ದಾಗ ಪ್ರಕರಣ ಬೆಳಕಿಗೆ ಬಂದಿತ್ತು.
*ಈ ಪ್ರಕರಣ ವಿದ್ಯಾಗಿರಿ ಪೊಲೀಸ ಠಾಣೆಯಲ್ಲಿ ದಾಖಲಾಗಿತ್ತು.*
ನ್ಯಾಯಾಲಯದಲ್ಲಿ ಇದ್ದ ಈ ಪ್ರಕರಣವಿದೀಗ ಇದೀಗ 14 ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಇಬ್ಬರು ಆರೋಪಿಗಳಿಗೂ ಶಿಕ್ಷೆ ಆಗಿದೆ.
*ಪ್ರಕರಣ ಹೇಗೆಲ್ಲಾ ನಡೆಯಿತು ಎನ್ನುವುದಕ್ಕೆ ಈ ದಾಖಲಾತಿಗಳ ಸಾರಾಂಶ ಇಲ್ಲಿದೆ ನೋಡಿ…*
ಶಾಸಕರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಜಾಫರ್ ತಡಕೋಡ ಪ್ರಕರಣದಿಂದ ಬಚಾವ್ ಆಗಲು ಎಲ್ಲಾ ಪ್ರಯತ್ನ ಮಾಡಿದ್ರೂ ಅದು ಸಾಧ್ಯವಾಗಿಲ್ಲಾ.
ಪೊಲೀಸರು ಈತನನ್ನು ಇನ್ನುವರೆಗೂ ಅರೆಸ್ಟ್ ಮಾಡದೇ ಇರುವುದು ಪೊಲೀಸ್ ಇಲಾಖೆಯ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟಿಸಿದೆ.