ಪರಿಸರ ಉಳಿದರೆ ಮಾತ್ರ ಮನುಷ್ಯ ಬದುಕಲು ಸಾಧ್ಯ
ಧಾರವಾಡ
ಮನುಷ್ಯ ಮತ್ತು ಪ್ರಾಣಿಗಳಿಗೆ ಬದುಕಲು ಇರುವುದೊಂದೇ ಭೂಮಿ, ಹಸಿರುಮಯವಾದ ಭೂಮಿಯನ್ನು ಜನಸಂಖ್ಯೆ ಹೆಚ್ಚಳ, ಮಾನವನ ಅತಿಯಾದ ಆಸೆಯಿಂದ ಹಸಿರು ಭೂಮಿಯನ್ನ ಕಾಂಕ್ರೀಟ್ ನಾಡಾಗಿ ಪರಿವರ್ತಿಸಿದ, ಅಭಿವೃದ್ದಿ ಹೆಸರಿನಲ್ಲಿ ಮರಗಿಡಗಳನ್ನು ಕಡಿಯಲಾಯಿತು. ಬೆಳೆಯುವ ಬೆಳೆಗಳಿಗೆ ರಾಸಯನಿಕ ಸಿಂಪಡಣೆ, ಕೆರೆಗಳನ್ನು ಬರಿದು ಮಾಡಲಾಯಿತು ಇದರಿಂದ ಪರಿಸರ ಹಾಳಾಯಿತು. ಪರಿಸರ ಉಳಿದರೆ ಮಾತ್ರ ಮನುಷ್ಯ ಬದುಕಲು ಸಾಧ್ಯ ಎಂದು ಅಪ್ಪಯ್ಯ ಬಿಡಿಮಠ್ಠ ಗ್ರಾಮ ಪಂಚಾಯತಿ ಅಧಿಕಾರಿ ಹೇಳಿದರು.
ಅಳ್ಳಾವರ್ ತಾಲೂಕು ಕುಂಬಾರಕೊಪ್ಪ ಗ್ರಾಮ ಶಾಲೆಯಲ್ಲಿ ಕುಂಬಾರಕೊಪ್ಪ ಕೆರೆ ಮತ್ತು ಹಿಂಡಸಗೇರಿ ಗ್ರಾಮದಲ್ಲಿ ಬಿ. ಡಿ .ಎಸ್ .ಎಸ್ ಸಂಸ್ಥೆಯ ಉಜ್ಜೀವನ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಜಾಗೃತಿ ಮತ್ತು ಸಸಿ ನೆಡುವ ಕಾರ್ಯಕ್ರಮವನ್ನು ಶಾಲಾ ಮಕ್ಕಳಿಗೆ ಸಸಿ ವಿತರಣೆಯ ಮೂಲಕ ಆರಂಭಿಸಿ ಮಾತಾಡಿದ ಅವರು,
ಪರಿಸರ ಉಳಿಸಬೇಕಾದರೆ ಮರಗಿಡ ಬೆಳಸಿ, ಉಳಿಸಬೇಕು ಮತ್ತು ಮಳೆ ನೀರು ಸಂಗ್ರಹ, ಸಾವಯವ ಕೃಷಿ ಪದ್ದತಿ ಆಳವಡಿಸಿಕೊಳ್ಳಬೇಕು. ಶಿಕ್ಷಣದಲ್ಲಿ ಮಕ್ಕಳಿಗೆ ಪರಿಸರ ಬಗ್ಗೆ ಅರಿವು ಮೂಡಿಸುವ ಪಠ್ಯಗಳನ್ನು ಹೇಳಿಕೊಡಬೇಕು. ಪ್ರತಿಯೊಬ್ಬ ನಾಗರಿಕರು ಪರಿಸರ ರಕ್ಷಣೆಗೆ ಮುಂದಾದಗ ಮಾತ್ರ ಭೂಮಿ ಉಳಿಯಲು ಸಾಧ್ಯ ಎಂದರು.
ಬಿ.ಡಿ. ಎಸ್.ಎಸ್ ಸಂಸ್ಥೆ ನಿರ್ದೇಶಕರು ನೇತೃತ್ವ, ಮಾರ್ಗದರ್ಶನದಲ್ಲಿ ಕುಂಬಾರಕೊಪ್ಪ ಗ್ರಾಮದಲ್ಲಿ ಪರಿಸರ ಉಳಿಸಬೇಕಾದರೆ ಪ್ರತಿಯೊಬ್ಬ ನಾಗರಿಕರ ಸಹಕಾರ ಅಗತ್ಯ ಎಂದರು.
ರಾಬರ್ಟ್ ಡಿಸೋಜ ಸಸಿ ನೆಟ್ಟು ನಂತರ ಸಸಿ ನಡುವ ಪರಿಸರ ದಿನಾಚರಣೆ ಅಚರಿಸಿದರು. ಶಾಲೆಯ ಮಕ್ಕಳು ಮತ್ತು ಪರಿಸರ ಪ್ರೇಮಿಗಳು, ಸ್ಥಳೀಯ ಗ್ರಾಮದ ಮುಖಂಡರು ಮಹಿಳೆಯರು ಬಿ.ಡಿ.ಎಸ್.ಎಸ್.ಸಂಸ್ಥೆಯ ಉಜ್ಜಯಿನಿ ಸಂಯೋಜಕರಾದ ಎ .ಬಿ ಪಟಾನ್ ಶೈಲಜಾ. ಶಾಂತ. ಭಾಗವಹಿಸಿದರು