ಸ್ಥಳೀಯ ಸುದ್ದಿ
ಪತ್ರಕರ್ತನ ಬಂಧನಕ್ಕೆ ಖಂಡನೆ- ಧಾರವಾಡದಲ್ಲಿ ಪ್ರತಿಭಟನೆ
ಧಾರವಾಡ
ಬಿಟಿವಿಯ ಹಿರಿಯ ವರದಿಗಾರ ಮೆಹಬೂಬ ಮುನವಳ್ಳಿ ಬಂಧನ ಖಂಡಿಸಿ ಇಂದು ಧಾರವಾಡದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರಜಾಪ್ರಭುತ್ವದ 4 ನೇ ಅಂಗವಾದ ಮಾಧ್ಯಮ ರಂಗದಲ್ಲಿರುವವರನ್ನು ಪೊಲೀಸರು ಬಂಧನ ಮಾಡುತ್ತಿರುವುದು ಖಂಡನೀಯ ಎಂದು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಲಕ್ಷ್ಮಣ ದೊಡ್ಡಮನಿ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ
ದಾವಣಗೇರಿ ಎಸಪಿ ಮೇಲೆ ಕಾನೂನು ಕ್ರಮಕ್ಕಾಗಿ ಹಾಗೂ ಹಿರಿಯ ಪತ್ರಕರ್ತ ಮೆಹಬೂಬ ಮುನವಳ್ಳಿ ಬಂಧನ ಖಂಡಿಸಲಾಯಿತು.
ಧಾರವಾಡದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾದಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಸಿಎಂಗೆ ಮನವಿ ಸಲ್ಲಿಸಿದ್ರು.