ಸ್ಥಳೀಯ ಸುದ್ದಿ
ಪತ್ನಿ ಕೊಂದ ಪಾಪಿ ಪತಿ
ಧಾರವಾಡ
ಪತ್ನಿಯ ಶೀಲ ಶಂಕಿಸಿ ಪತಿರಾಯನೊಬ್ಬ ಚಾಕು ಇರಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಪತ್ನಿ ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
ಧಾರವಾಡದ ಮೆಹಬೂಬನಗರದಲ್ಲಿ ಈ ಘಟನೆ ನಡದಿದೆ.
ನಿನ್ನೆ ರಾತ್ರಿ ಇಸಾಕ್ ಜಾಗಿರದಾರ ಎನ್ನುವನು ಪತ್ನಿಗೆ ಚಾಕು ಇರಿದು, ಧಾರವಾಡದ ಉಪನಗರ ಪೊಲೀಸರಿಗೆ ಶರಣಾಗಿದ್ದ. ನಿನ್ನೆ ಹಾಫ ಮರ್ಡರ್ ಕೇಸ ದಾಖಲಾಗಿತ್ತು.
ಇಂದು ಚಿಕೆತ್ಸೆ ಫಲಿಸದೇ ಪತ್ನಿ ಆಸಮಾ ಸಾವನ್ನಪ್ಪಿದ್ದು, ಗಂಡನ ಮೇಲೆ ಕೊಲೆ ಕೇಸ್ ದಾಖಲಾಗಿದೆ.