
POWER CITY NEWS : HUBBALLI ಹುಬ್ಬಳ್ಳಿ :ಹುಬ್ಬಳ್ಳಿಯ ಯುವ ಉದ್ಯಮಿ ಹಾಗೂ ಕೆ.ಜಿ.ಪಿ. ಫೌಂಡೇಶನ್ ಅಧ್ಯಕ್ಷ ಶ್ರೀಗಂಧ ಶೇಟ್ ತಮ್ಮ 25ನೆ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.ಇಂದು ಲಿಯೋ ಕ್ಲಬ್ ಹುಬ್ಬಳ್ಳಿ ಮತ್ತು ಶ್ರೀ ಮಹಾವೀರ್ ಅಂಬ್ ಸೆಂಟರ್ ಹುಬ್ಬಳ್ಳಿ ಅವರ ಸಹಯೋಗದಲ್ಲಿ ಕೆ.ಜಿ.ಪಿ. ಫೌಂಡೇಶನ್ ಸದಸ್ಯರು ಸೇರಿದಂತೆ ಎಲ್ಲರೂ ಶ್ರೀಗಂಧ ಶೇಟ್ ಹುಟ್ಟುಹಬ್ಬದ ಅಂಗವಾಗಿ ಕೃತಕ ಕೈ-ಕಾಲು ಜೋಡಣಾ ಶಿಬಿರ ಆಯೋಜಿಸಿದ್ದರು.

ಶಿಬಿರದಲ್ಲಿ ಅಗತ್ಯವಿರುವ ಬಡ ಮಧ್ಯಮ ವರ್ಗದ 30 ಜನ ಅಂಗವಿಕಲರನ್ನು ಗುರುತಿಸಿ 30 ಕೃತಕ ಕಾಲುಗಳು ದಾನ ಮಾಡಲಾಗಿದೆ.ಅಲ್ಲದೆ ಬೀದಿ ಬದಿ ವ್ಯಾಪಾರಸ್ಥರಿಗೆ ಬಿಸಿಲಿನ ಬೇಗೆಯಿಂದ ಅನುಕೂಲವಾಗಲಿ ಎನ್ನುವ ಉದ್ದೇಶ ದಿನದ ನೂರಾರು ಚತ್ರಿಗಳನ್ನು ಕೂಡ ವಿತರಣೆ ಮಾಡಲಾಗಿದೆ.ಇನ್ನು ಅನೇಕ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಗುರುಸಿತಿ ಕೊಂಡಿರುವ ಶ್ರೀಗಂಧ ಶೇಟ್ ಕುಟುಂಬ ಜನ ಸಾಮಾನ್ಯರಿಗೆ ಅನೇಕ ಸಹಾಯ ಮಾಡಿದ್ದಾರೆ.