ಸ್ಥಳೀಯ ಸುದ್ದಿ
ಪಂಚಮಿಯಂದು ಯಾದಗಿರಿಯಲ್ಲಿ ವಿಶೇಷ ಜಾತ್ರೆ
ಯಾದಗಿರಿ
ಯಾದವರು ಆಳಿದ ಗಡಿನಾಡಿನ ಯಾದಗಿರಿ ಜಿಲ್ಲೆಯಲ್ಲಿ ಪಂಚಮಿ ಹಬ್ಬದ ದಿನ ತುಂಬಾನೆ ವಿಶೇಷ ಆಚರಣೆ ಇರುತ್ತೆ.
ಇಲ್ಲಿನ ಪಂಚಮಿ ಹಬ್ಬಕ್ಕೆ ದೂರದ ಊರುಗಳಿಂದ ಅನೇಕ ಜನರು ಬೆಟ್ಟದ ಮೇಲೆ ಹತ್ತಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಪಂಚಮಿ ಹಬ್ಬ ಆಚರಣೆ ಮಾಡ್ತಾರೆ.
ಪಂಚಮಿ ಹಬ್ಬದಂದು ನಡೆಯುವ ಜಾತ್ರೆಯೇ ಕೊಂಡಮಾಯಿ ಜಾತ್ರೆ. ಗುರುಮಿಠಕಲ್ ಮತಕ್ಷೇತ್ರದಲ್ಲಿ ಬರುವ ಈ ಜಾತ್ರೆಗೆ ಲಕ್ಷಾಂತರ ಮಂದಿಭಕ್ತರು ಬರ್ತಾರೆ.
ಇಲ್ಲಿ ಚೇಳುಗಳನ್ನು ಜಾತ್ರೆಗೆ ಬಂದವರು ಮೈಮೇಲೆ ಇಟ್ಟುಕೊಂಡು ಆಟವಾಡ್ತಾರೆ. ಬಾಯಲ್ಲಿ ಹಾಕಿಕೊಂಡು ಫೋಟೊಗೆ ಫೋಸ್ ಕೊಡ್ತಾರೆ. ಆದ್ರೆ ಚೇಳುಗಳು ಮಾತ್ರ ಕಡಿಯುವುದಿಲ್ಲಾ.
ಪ್ರಕೃತಿ ವಿಶೇಷತೆ ಹೊಂದಿರುವ ಗುಡ್ಡದ ದೇವಸ್ಥಾನದ ಸುತ್ತಮುತ್ತಲಿನ
ಮಣ್ಣಿನಲ್ಲಿರುವ ಚೇಳುಗಳಲ್ಲಿ ವಿಷಕಾರಿ ಅಂಶ ಕಡಿಮೆ ಇರುವುದೇ ಇದಕ್ಕೆಲ್ಲಾ ಕಾರಣ ಎನ್ನುವ ಪ್ರತೀತಿ ಇದೆ.
ಅಚ್ಚರಿ ಎಂದ್ರೆ ಹಲವಾರು ವರ್ಷಗಳಿಂದ
ಇದುವರೆಗೂ ಚೇಳು ಇಲ್ಲಿ ಯಾರಿಗೂ ಕಡಿಯದೇ ಇರುವುದು ಎನ್ನುವುದು.
ಪವರ್ ಸಿಟಿನ್ಯೂಸ್ ಕನ್ನಡ ಸತ್ಯಸದಾಕಾಲ