ಸ್ಥಳೀಯ ಸುದ್ದಿ

ನೂತನ ನವೀಕೃತ ರೈಲ್ವೆ ನಿಲ್ದಾಣ ಉದ್ಘಾಟನೆಗೆ ಕ್ಷಣಗಣನೆ

ಧಾರವಾಡ

ಧಾರವಾಡ ಜಿಲ್ಲಾ ಕೇಂದ್ರದ ಮೇಲ್ದರ್ಜೆಗೆರಿದ ರೈಲು ನಿಲ್ದಾಣದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.

ಕೇಂದ್ರ ಕಲ್ಲಿದ್ದಲು ಹಾಗು ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಪ್ರಲ್ಹಾದ ಜೋಷಿ ಅವರ ಸತತ ಪ್ರಯತ್ನದ ಫಲವಾಗಿ ಇಂದು ರೈಲ್ವೆ ನಿಲ್ದಾಣ ಎಲ್ಲರೂ ನೋಡುವಂತಾಗಿದೆ.

ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅಕ್ಟೋಬರ್ 11 ಕ್ಕೆ ನಾಳೆ ಧಾರವಾಡದ ರೈಲ್ವೆ ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ಈಗಾಗಲೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಭಾಗಿಯಾಗುವವರ ವಿವರ ಹೀಗಿವೆ.

ರೈಲ್ವೆ ನಿಲ್ದಾಣದಲ್ಲಿ ಯೋಗ ಮುದ್ರೆ ಚಿಹ್ನೆ ಕಲಾಕೃತಿ, ಸಾಹಿತಿಗಳು ಕವಿಗಳ ಚಿತ್ರಗಳು, ಜಾನಪದ ಕಲೆಗಳು, ಆಕರ್ಷಕ ಬಣ್ಣದ ಚಿತ್ತಾರದ ಗೋಡೆಗಳು, ಕನ್ನಡದ ಅಕ್ಷರಗಳು ಹಾಗೂ ಸೀರೆಗಳು ಎಲ್ಲರ ಗಮನ ಸೆಳೆಯುತ್ತಿವೆ.

Related Articles

Leave a Reply

Your email address will not be published. Required fields are marked *