ನುಗ್ಗಿಕೇರಿ ಗಲಾಟೆ ಪ್ರಕರಣಕ್ಕೆ ಹೊಸ ತಿರುವು
ಧಾರವಾಡ
ನುಗ್ಗಿಕೇರಿ ಗಲಾಟೆ ಪ್ರಕರಣ ಇದೀಗ ಮತ್ತೆ ಹೊಸ ರೂಪದಲ್ಲಿ ಸದ್ದು ಮಾಡುತ್ತಿದೆ.
ಕಲ್ಲಂಗಡಿ ಹಣ್ಣು ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ರಾಮ ಸೇನೆ ಯಿಂದ ಕೌಂಟರ್ ದೂರು ದಾಖಲು ಆಗಿದೆ.
ಧಾರವಾಡ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಕೌಂಟರ್ ದೂರನ್ನು ಶ್ರೀ ರಾಮ ಸೇನೆ ಕಾರ್ಯಕರ್ತರು ದಾಖಲಿಸಿದ್ದಾರೆ.
ಘಟನೆಯಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪದಲ್ಲಿ ಬಂಧಿತರಾಗಿರುವ 4 ಮಂದಿ ಸ್ನೇಹಿತರು ಇದೀಗ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದು, ಘಟನೆಯಲ್ಲಿ ನಭೀಸಾಬ ಪಾತ್ರವೇ ಇಲ್ಲಾ. ಘಟನೆ ದಿನವೇ ಆತ ಅಲ್ಲಿರಲಿಲ್ಲಾ. ಬೇರೆಯದ್ದೇ ವ್ಯಕ್ತಿ ಕಲ್ಲಂಗಡಿ ಹಣ್ಣಿನ ಮುಂದೆ ನಿಂತಿದ್ದ.
ಎಂದಿನಂತೆ ದೇವಸ್ಥಾನಕ್ಕೆ ದರ್ಶನಕ್ಕೆ ಹೋಗಿದ್ದ ನಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದು ಇದೆ ಎಂದು, ದೂರಿನಲ್ಲಿ ನಮೂದಿಸಲಾಗಿದೆ.
ದೂರಿನ ಸಂಪೂರ್ಣ ಸಾರಾಂಶ ಇಲ್ಲಿದೆ ನೋಡಿ…..
ಆತನನ್ನು ಹುಡುಕಿ ಪತ್ತೆ ಹಚ್ಚಿ, ಈ ಷಡ್ಯಂತ್ರದ ಹಿಂದಿನ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ಮಹಾನಿಂಗ ಎನ್ನುವ ಯುವಕ ದೂರು ಕೊಟ್ಟಿದ್ದಾನೆ.
ನಮ್ಮ ಮೇಲೆ ನಭೀಸಾಬ ದೂರು ಕೊಟ್ಟಿದ್ದು ಇದ್ದು, ಆತ ಘಟನೆಯ ದಿನವೇ ಇಲ್ಲಾ ಎನ್ನುತ್ತಿರುವುದು ಪ್ರಕರಣಕ್ಕೆ ಹೊಸ ತಿರುವು ಕೊಟ್ಟಂತೆ ಆಗಿದೆ.