ನಲವಡಿ ಟೋಲ್ ಪ್ಲಾಜಾ ಬಳಿ ಕಾಂಗ್ರೇಸ್ ನಿಂದ ಹಠಾತ್ ಪ್ರತಿಭಟನೆ!
ಅಣ್ಣಿಗೇರಿ: ಗದಗ- ಹುಬ್ಬಳ್ಳಿ ನಡುವೆ ಮಾರ್ಗ ಮಧ್ಯದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಶ್ರೀ ಸಾಯಿ ಟೋಲ್ ಪ್ಲಾಜಾದಲ್ಲಿ ನಿಗದಿಗಿಂತ ಹೆಚ್ಚಿನ ಶುಲ್ಕ ವಿಧಿಸಲಾಗಿದೆ.
ಎಂದು ಆರೋಪಿಸಿ ಟೋಲ್ ವಸೂಲಾತಿಯಲ್ಲಿ ಜಾರಿಗೋಳಿಸಿರುವ ಶುಲ್ಕ ಇ ಭಾಗದ ಸರಕು ಸಾಗಣಿದಾರರಿಗೆ ಹೊರೆಯಾಗಲಿದೆ ಮತ್ತು ಬಿಜೆಪಿ ಸರ್ಕಾರ ರಾಜಾರೋಷವಾಗಿ ಬಡ ಚಾಲಕರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾಜಿ ಶಾಸಕ ಕಾಂಗ್ರೇಸ್ ಮುಖಂಡ ಎನ್ ಎಚ್ ಕೊನರೆಡ್ಡಿ ನೂರಾರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ನಲವಡಿಯ ಟೋಲ್ ಬಂದ್ ಮಾಡಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಮುಂಬರುವ ದಿನಗಳಲ್ಲಿ ಟೋಲ್ ಶುಲ್ಕವನ್ನು ಕಡಿಮೆ ಮಾಡಿ ಈ ಭಾಗದ ರೈತರು ಮತ್ತು ಬಡ ಸರಕು ವಾಹನ ಚಾಲಕರಿಗೆ ಅನುವ ಮಾಡಿಕೊಡದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಟೋಲ್ ಆರಂಭವಾದಾಗಿನಿಂದಲೂ ಅಕ್ಕ ಪಕ್ಕ ಹಳ್ಳಿಯ ನಿವಾಸಿಗಳ ಸಂಚಾರಿ ವಾಹನಗಳಿಗೂ ಇದರ ಪರಿಣಾಮ ಎದುರಿಸಬೆಕಾಗಿದೆ ಎಂದು ಆರೋಪಿಸಿ ಟೋಲ್ ಟೆಂಡರ ದಾರರ ವಿರುದ್ದ ಘಂಟೆಗಟ್ಟಲೆ ರಸ್ತೆ ಬಂದ ಮಾಡಿಸಿ ಪ್ರತಿಭಟನೆ ನಡೆಸಿದರು.
ವಿಷಯ ತಿಳಿದ ಅಣ್ಣಿಗೇರಿ ಪೊಲಿಸ್ ಠಾಣಾಧಿಕಾರಿ ಎಲ್ ಕೆ ಜೂಲಕಟ್ಟಿ ಮತ್ತು ಪಿ ಐ ಮಠಪತಿ ಸ್ಥಳಕ್ಕಾಗಮಿಸಿ ಪ್ರತಿಭಟನೆ ನಿಯಂತ್ರಣಕ್ಕೆ ತಂದರು.
ಈ ಕುರಿತು ಮಾಹಿತಿ ನೀಡಿದ ಶ್ರೀ ಸಾಯಿ ಎಜನ್ಸಿಯ ಮುರುಳಿ ಎಂಬುವವರು ಮಾತನಾಡಿ ಈಗಾಗಲೇ ಅಕ್ಕ ಪಕ್ಕದ ಹಳ್ಳಿಯ ವಾಹನಗಳಿಗೆ ತಿಂಗಳುಗಳ ಪಾಸ್ ಮಾಡಿ ಕೊಡುವುದಾಗಿ ಭರವಸೆ ನೀಡಿದ್ದೇವೆ ಎಂದು ತಿಳಿಸಿದರು.
ಇನ್ನೂ ಇದೆ ಮಾರ್ಗಾವಾಗಿ ಗದಗನಿಂದ ಹುಬ್ಬಳ್ಳಿಯತ್ತ ಹೊರಟಿದ್ದ ಹಾನಗಲ್ ಶಾಸಕ ಶ್ರೀನಿವಾಸ ಮಾನೆ, ಹಾಗೂ ವಿನೋದ್ ಅಸೂಟಿ ಕೂಡ ಪ್ರತಿಭಟನೆಗೆ ಸಾಥ್ ನೀಡಿದರು.