ಧಾರವಾಡ ಉಪನಗರ ಠಾಣೆ ವಿಭಜನೆ ಯಾವಾಗ? ಸಿಎಂ ಬಸವರಾಜ ಬೊಮ್ಮಾಯಿಯವರೇ……
ಧಾರವಾಡ
ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿ ಬಹಳ ದೊಡ್ಡದು. ಇದರಿಂದ ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಅನಿವಾರ್ಯವಾಗಿ ಇನ್ನೊಂದು ಪೊಲೀಸ್ ಠಾಣೆ ಆದ್ರೆ ಮಾತ್ರ ಅನುಕೂಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ಕಚೇರಿ, ಎಸಿ ಕಚೇರಿ, ಜಿಲ್ಲಾ ಪಂಚಾಯತ್, ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಹೊಸ ಬಸ್ ನಿಲ್ದಾಣ, ಡಿಮಾನ್ಸ ಆಸ್ಪತ್ರೆ, ಜಿಲ್ಲಾ ನ್ಯಾಯಾಲಯ, ಡಿಎಚ್ಓ ಕಚೇರಿ, ಜಿಲ್ಲಾ ಆಸ್ಪತ್ರೆ, ಕರ್ನಾಟಕ ಕಾಲೇಜು, ಎಸ್.ಬಿ.ಐ, ಎಲ್ಐಸಿ, ಫಾರೆಸ್ಟ ಆಫೀಸ್, ಜಿಲ್ಲಾಧಿಕಾರಿ ನಿವಾಸ, ನ್ಯಾಯಾಧೀಶರ ವಸತಿ ಗೃಹಗಳು, ಇಬ್ಬರು ಹಾಲಿ ಶಾಸಕರ ಮನೆಗಳು ಹಾಗೂ ಮಾಜಿ ಶಾಸಕರುಗಳ ಮನೆಗಳು ಬರುತ್ತವೆ.
ಈ ಏರಿಯಾಗಳಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಣ ಮಾಡಲು ಒಂದೇ ಒಂದು ಪೊಲೀಸ್ ಠಾಣೆ, ಅದು ಧಾರವಾಡ ಉಪನಗರ ಪೊಲೀಸ್ ಠಾಣೆ.
ಇಲ್ಲಿ ಒಟ್ಟು 87 ಸಿಬ್ಬಂದಿ ಕೆಲಸ ಮಾಡ್ತಾರೆ. ಪಿಐ 1, 3 ಮಂದಿ ಪಿಎಸ್ಐ ಗಳ ಪೈಕಿ ಇಬ್ಬರು ಮಾತ್ರ ಇದ್ದಾರೆ. _10 ಮಂದಿ ASI, HC- 21, Pc- 46 ಹಾಗೂ ಹೋಮಗಾರ್ಡ 6 ಮಂದಿ ಇದ್ದು, ಇವರಿಂದ ದೊಡ್ಡ ವ್ಯಾಪ್ತಿ ಹೊಂದಿರುವ ಉಪನಗರ ಪೊಲೀಸ್ ಠಾಣೆ ನಿಯಂತ್ರಣ ಕಷ್ಟವಾಗುತ್ತಿದೆ.
ಸಿಎಂ ಬಸವರಾಜ ಬೊಮ್ಮಾಯಿ ಸ್ವತಂ: ಬೆಳಗಾವಿ ಜಿಲ್ಲೆಗೆ ರಸ್ತೆ ಮಾರ್ಗವಾಗಿ ಹೋಗಬೇಕಾದ್ರೆ ಇದೇ ಉಪನಗರ ಠಾಣೆ ಮುಂದೆನೇ ಹೋಗಬೇಕು.
ಹೀಗಾಗಿ ಧಾರಾವಾಡದ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿರುವ ಪೊಲೀಸ್ ಚೌಕಿಯನ್ನು ಠಾಣೆಯನ್ನಾಗಿ ದೊಡ್ಡ ಪ್ರಮಾಣದಲ್ಲಿ ಮಾರ್ಪಾಡು ಮಾಡಿದ್ರೆ ದೊಡ್ಡದಾಗಿರುವ ಉಪನಗರ ಠಾಣೆ ವ್ಯಾಪ್ತಿಯಲ್ಲಿ ನ ಕ್ರೈಂಗಳನ್ನು ಕಂಟ್ರೋಲ್ ಮಾಡಬಹುದು ಎನ್ನುವುದು ಹಿರಿಯ ನಾಗರಿಕರು ಹಾಗೂ ಪೊಲೀಸ್ ಇಲಾಖೆಯ ಮೂಲಗಳು ಹೇಳುತ್ತಿವೆ.
ಸಿಎಂ ಬಸವರಾಜ ಬೊಮ್ಮಾಯಿ ಅವರು ಧಾರವಾಡ ಜಿಲ್ಲೆಯವರೇ ಆದ ಕಾರಣ ಮುತುವರ್ಜಿಯಿಂದ ಉಪನಗರ ಪೊಲೀಸ್ ಠಾಣೆಯನ್ನು ವಿಭಜಿಸಿ ಮತ್ತೊಂದು ಪೊಲೀಸ್ ಠಾಣೆ ಮಂಜೂರು ಮಾಡಿದ್ರೆ ಧಾರವಾಡ ಜಿಲ್ಲೆಗೆ ಅದ್ರಲ್ಲೂ ಧಾರವಾಡ ನಗರಕ್ಕೆ ಸಿಎಂ ಕೊಟ್ಟ ಬಹು ದೊಡ್ಡ ಕೊಡುಗೆ ಇದಾಗಲಿದೆ.