ಧಾರವಾಡದ ಪಾಲಿಕೆ ವಲಯ 1 ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ವಲಯ ಆಯುಕ್ತರು
ಧಾರವಾಡ
ಸ್ಮಾರ್ಟ ಸಿಟಿ ಯೋಜನೆಗಳಲ್ಲಿ ಅವಳಿನಗರ ಹುಬ್ಬಳ್ಳಿ ಧಾರವಾಡವೂ ಸೇರಿವೆ.
ಹೀಗಾಗಿ ಇಲ್ಲಿ ಅಭಿವೃದ್ಧಿಗೆ ಹೆಚ್ಚಿನ ವೇಗ ಕೊಡಲಾಗುತ್ತಿದೆ. ಈ ನಿಟ್ಟಿನಲ್ಲಿ ಧಾರವಾಡದ ಪಾಲಿಕೆ ವಲಯ 1 ರ ಕಮೀಶನರ್ ಒಬ್ಬರು ಹಗಲಿರುಳು ಶ್ರಮಿಸಿ ಕೆಲಸ ಮಾಡುತ್ತಿದ್ದಾರೆ.
ಬೆಳ್ಳಿಗ್ಗೆಯಿಂದಲೇ ಪೀಲ್ಡನಲ್ಲಿರುವ ಇವರನ್ನು ನೋಡಿದ್ರೆ ಕೆಲವರಿಂಗಂತೂ ಯಾಕೆ ಬಂದ್ರಪ್ಪಾ ಇವರು? ಅನ್ನೊ ಹೆದರಿಕೆ ಅಷ್ಟರ ಮಟ್ಟಿಗೆ ಕಾನೂನು ಪಾಲನೆ ಮಾಡುವುದು ಕಡ್ಡಾಯ ಎಂದು ಸಾರ್ವಜನಿಕರಿಗೆ ಹಾಗೂ ವ್ಯಾಪಾರಿಗಳಿಗೆ ತಿಳುವಳಿಕೆ ಮೂಡಿಸಿದ್ದಾರೆ ಈ ಕಮೀಶನರ್.
ಈ ಖಡಕ್ ಅಧಿಕಾರಿಯ ಹೆಸರು ಫಕ್ಕಿರೇಶ ಇಂಗಳಗಿ. ಕೆಎಎಸ್ ಆಗಿರುವ ಇವರು ಇದೀಗ ಧಾರವಾಡದ ಮಹಾನಗರ ಪಾಲಿಕೆ ಜೋನಲ್ 1 ಕಮೀಶನರ್.
ಧಾರವಾಡದ ನಗರದ ಬಹುತೇಕ ಭಾಗಗಲ್ಲಿ ಸ್ವಚ್ಚತೆಗೆ ಆದ್ಯತೆ ಕೊಟ್ಟಿರುವ ಇವರು, ಅಂಗಡಿಗಳ ಮುಂದೆ ಪ್ಲಾಸ್ಟಿಕ್ ಬಿದ್ದರೆ ಸಾಕು ದಂಡ ಹಾಕುವ ಕೆಲವನ್ನು ಮಾಡುತ್ತಿದ್ದಾರೆ.
ಜೋತೆ ಜೋತೆಗೆ ಹೋಟೆಲಗಳಲ್ಲಿ ಆಹಾರದ ಗುಣಮಟ್ಟ ಪರಿಶೀಲನೆ ಮಾಡಲು ತಮ್ಮ ಸಿಬ್ಬಂದಿ ವರ್ಗಕ್ಕೂ ತಿಳಿಸಿದ್ದಾರೆ.
ಇವರು ನಗರವನ್ನು ಸುಂದರವಾಗಿಡಲು ಮಾಡುತ್ತಿರುವ ಕೆಲಸಕ್ಕೆ ಪಾಲಿಕೆಯ ಚುನಾಯಿತ ಜನಪ್ರತಿನಿಧಿಗಳು ಕೂಡ ಸಾಥ್ ಕೊಡುತ್ತಿದ್ದಾರೆ.
ಕರ್ತವ್ಯದ ಮೇಲೆ ಇರದ ಸಿಬ್ಬಂದಿಗಳಿಗೆ ನೋಟಿಸ ಕೊಡುವ ಕೆಲಸವನ್ನು ಮಾಡುವುದರ ಮೂಲಕ ಅವರಿಗೆ ಬಿಸಿ ಮುಟ್ಟಿಸಿ ಕಾಯಕವೇ ಕೈಲಾಸ ಎನ್ನುವುದನ್ನು ತಿಳಿಸಿಕೊಡುತ್ತಿದ್ದಾರೆ.
ದಿನ ಜ್ಯಾಂದೆ ಪಂಗಾರ ಆಂದೆ ಎನ್ನುವ ಬಹುತೇಕರಿಗೆ ಇವರು ಖಡಕ್ ಆಫೀಸರ್ ಆಗಿದ್ದಾರೆ.
ಸಾರ್ವಜನಿಕರಿಗೆ ತೀರಾ ಹತ್ತಿರುವಾಗಿರುವ ಇವರು ಕಚೇರಿಗೆ ಬಂದವರನ್ನು ಅಷ್ಟೇ ಸಮಾಧಾನದಿಂದ ಮಾತಮಾಡಿಸಿ ಸಮಸ್ಯೆ ಬಗೆಹರಿಸಿ ಕಳುಹಿಸುತ್ತಾರೆ.
ಬಡತನದಿಂದ ರೈತಾಪಿ ಕುಟುಂಬ ವರ್ಗದಿಂದ ಬಂದಿರುವ ಇವರಿಗೆ ಮಾನವೀಯತೆಯ ಕಳಕಳಿಯೂ ಸಾಕಷ್ಟಿದೆ.
ಹೊರ ಜಿಲ್ಲೆಯಿಂದ ವಿದ್ಯಾಭ್ಯಾಸಕ್ಕೆ ಬಂದಿರುವ ಬಡ ವಿದ್ಯಾರ್ಥಿಗಳಿಗೂ ಇವರು ವಿದ್ಯಾರ್ಜನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಇಂತಹ ಪಾಲಿಕೆ ಕಮೀಶನರ್ ಮುಂದೆ ನಿಯಮಾನುಸಾರವಾಗಿ ಇಲ್ಲದೇ ಇರುವ ಧಾರವಾಡ ನಗರದಲ್ಲಿನ ಪಿಜಿಗಳ ಪರಿಶೀಲನೆ ಮಾಡಿ ಕಾನೂನು ಕ್ರಮ ಕೈಗೊಳ್ಳುವುದು ದೊಡ್ಡ ಸವಾಲಾಗಿದೆ.
ಇದನ್ನು ಪಾಲಿಕೆ 1 ರ ವಲಯ ಆಯಕ್ತರು ಯಾವ ರೀತಿ ಬಗೆಹರಿಸ್ತಾರೆ ನೋಡಬೇಕಿದೆ.
ಪವರ್ ಸಿಟಿ ನ್ಯೂಸ್ ಕನ್ನಡ
ಇದು ಸತ್ಯ ಸದಾಕಾಲ