ಧಾರವಾಡ
ಧಾರವಾಡದ ತಬಲಾ ಮಾಮಾ ವಿದ್ವಾನ್ ಹೆಗಡೆ ಇನ್ನು ನೆನಪು ಮಾತ್ರ….
ಧಾರವಾಡ
ಧಾರವಾಡದ ತಬಲಾ ಮಾಮಾ ಎಂದೇ ಖ್ಯಾತಿ ಗಳಿಸಿದ್ದ ವಿದ್ವಾನ್ ಗಜಾನನ ಹೆಗಡೆ ಅವರು ಇನ್ನು ನಮಗೆಲ್ಲಾ ನೆನಪು ಮಾತ್ರ.
58 ವರ್ಷದ ವಿದ್ವಾನ್ ಅವರು
ಹಿಂದುಸ್ತಾನಿ ತಬಲಾ ಕಲಾವಿದ ಮತ್ತು ಶ್ರೇಷ್ಠ ಗುರುಗಳು. ಮೂಲತಃ ಶಿರಸಿ ಗ್ರಾಮದವರಾದ ಇವರು ಕಳೆದ 25ವರ್ಷಗಳಿಂದ ಧಾರವಾಡದಲ್ಲಿ ಸಂಗೀತ ಸೇವೆ ಸಲ್ಲಿಸುತ್ತಿದ್ದರು. ತಬಲಾ ವಿದ್ಯಾರ್ಥಿಗಳ ನೆಚ್ಚಿನ ತಬಲಾ ಮಾಮಾ ಎಂದೇ ಪ್ರಕ್ಯಾತವಾಗಿದ್ದರು.
ಧಾರವಾಡದ ಕಲ್ಯಾಣ ನಗರ ನಿವಾಸಿ ಇಂದು ಬೆಳಗ್ಗೆ ತಮ್ಮ ಮನೆಯಲ್ಲಿ ತೀವ್ರ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.
ಬಾಲಬಳಗ ಶಾಲೆಯಲ್ಲಿ ತಬಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು…ಇವರು ಹೆಂಡತಿ…ಸಹೋದರ ಸಹೋದರಿಯರು ಮತ್ತು ಅಪಾರ ಶಿಷ್ಯಬಳಗವನ್ನು ಬಿಟ್ಟು
ಇಹಲೋಕ ತ್ಯಜಿಸಿದ್ದಾರೆ.
ಇವರ
ಅಂತ್ಯ ಕ್ರಿಯೆ ಸ್ವಗ್ರಾಮದಲ್ಲಿ ನೆರವೆರಿಸಲಾಗುವುದು ಎಂದು ಅವರ ಆತ್ಮೀಯ ಬಳಗದಲ್ಲಿರುವ ಸಾಹಿತಿ
ಸಮೀರ ಜೋಶಿ ತಿಳಿಸಿದ್ದಾರೆ.
ವಿದ್ವಾನ್ ಗಜಾನನ ಹೆಗಡೆ ಅವರು
ಪಂ. ಚಂದ್ರಶೇಖರ ಪುರಾಣಿಕಮಠ ಗುರುಗಳವರ ‘ಗುರುಕೃಪಾ ‘ಟ್ರಸ್ಟ್ ನ ಕಾರ್ಯದರ್ಶಿ
ಕೂಡ ಆಗಿದ್ದರು.