ಧಾರವಾಡದ ಜನಸ್ನೇಹಿ ತಹಶಿಲ್ದಾರ ವರ್ಗಾವಣೆ
ಧಾರವಾಡ
ಹೌದು ಧಾರವಾಡ ತಾಲೂಕಿಗೆ ಹೊಸ ತಹಶಿಲ್ದಾರ ಆಗಿ ಕೆಎಎಸ್ ಅಧಿಕಾರಿ ಸಂತೋಷ ಹಿರೇಮಠ ಅಧಿಕಾರ ಸ್ವೀಕಾರ ಮಾಡಿದ್ದು, ಜನಸ್ನೇಹಿ ತಾಲೂಕು ದಂಡಾಧಿಕಾರಿಯಾಗಿ ಕೆಲಸ ಮಾಡಿರುವ ಸಂತೋಷ ಬಿರಾದಾರ ಅವರ ವರ್ಗಾವಣೆ ಆಗಿದೆ.
ಸಂತೋಷ ಬಿರಾದಾರ ಅವರ ಕೆಲಸ ಎಂತಹದ್ದು ಎನ್ನುವುದನ್ನು ನೋಡಿದ್ರೆ ಮಾನವೀಯತೆಯುಳ್ಳ ಅಧಿಕಾರಿ ಎನ್ನುವ ಮಾತುಗಳು ಎಲ್ಲರಿಂದ ಕೇಳಿ ಬರುತ್ತಿವೆ.
ಕೊರೊನಾ ಸಂಕಷ್ಟದ ಸಮಯದಲ್ಲಿ ಹಲವಾರು ಮಂದಿಗೆ ಸಂಕಷ್ಟಕ್ಕೆ ಮಿಡಿದವರಿಗೆ ಸಹಾಯ ಮಾಡಿದ್ದರು ತಹಶಿಲ್ದಾರ ಸಂತೋಷ ಬಿರಾದಾರ.
ಅಷ್ಟೇ ಅಲ್ಲದೇ ಕೆಲಸದ ನಿಮಿತ್ತ ಧಾರವಾಡ ತಾಲೂಕಿನ ಅಮ್ಮಿನಭಾವಿಯಿಂದ ಧಾರವಾಡಕ್ಕೆ ಬರುವಾಗ ದಾರಿ ಮಧ್ಯೆ ಸವದತ್ತಿ ಮೂಲದ ವ್ಯಕ್ತಿಯ ಬೈಕ್ ಅಪಘಾತವಾದಾಗ ಸ್ವಂತ: ತಮ್ಮದೇ ಸರ್ಕಾರಿ ವಾಹನದಲ್ಲಿ ಕರೆದುಕೊಂಡು ಜಿಲ್ಲಾಸ್ಪತ್ರೆಗೆ ಬಂದು ಚಿಕೆತ್ಸೆ ಕೊಡಿಸಿದ್ದಾರೆ.
ಇಂತಹ ಅಧಿಕಾರಿ ಧಾರವಾಡ ತಾಲೂಕಿನಿಂದ ಬೇರೆಡೆಗೆ ವರ್ಗವಾಗಿ ಸಹಜವಾಗಿಯೇ ಅವರ ಸಿಬ್ಬಂದಿ ವರ್ಗ ಹಾಗೂ ಅತ್ಮೀಯ ಬಳಗದಲ್ಲಿ ಸ್ವಲ್ಪ ನೋವು ತಂದಿದೆ.
ಆದ್ರೆ ಸರ್ಕಾರದ ಆದೇಶದ ಮುಂದೆ ಏನು ಮಾಡಲಿಕ್ಕೆ ಆಗೋಲ್ಲಾ ಎನ್ನುವ ಪರಿಕಲ್ಪನೆಯು ಅಧಿಕಾರಿಗಳಲ್ಲಿದೆ.
ಹೀಗಾಗಿ ಹೊಸ ತಹಶಿಲ್ದಾರ ಅವರಿಗೆ ಸ್ವಾಗತ ಮಾಡಿ ಹಳೆಯ ತಹಶಿಲ್ದಾರರ ಅವರನ್ನು ಬಿಳ್ಕೋಡುವ ಕಾರ್ಯಕ್ರಮ ನಡೆಯಿತು.