ಸ್ಥಳೀಯ ಸುದ್ದಿ
ಧಾರವಾಡದ ಎಪಿಎಂಸಿಯಲ್ಲಿ ಅಮೃತ ದೇಸಾಯಿ ಪರ ಮೇಯರ್ ಪ್ರಚಾರ
ಧಾರವಾಡ
ಧಾರವಾಡದ ಎಪಿಎಂಸಿ ಮಾರುಕಟ್ಟೆಗೆ ಇಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ರವರು ಭೇಟಿ ನೀಡಿ ಬಿಜೆಪಿ ಅಭ್ಯರ್ಥಿಯಾದ ಅಮೃತ ದೇಸಾಯಿ ರವರ ಪರ ಪ್ರಚಾರ ಸಭೆ ನಡೆಸಿ, ಮತಯಾಚನೆ ನಡೆಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ರೈತರಿಗೆ ನೀಡಿರುವ ಯೋಜನೆಗಳ ಬೆಗ್ಗೆ ವಿವರಿಸಿ, ಮುಂದಿನ ದಿನಗಳಲ್ಲಿ ರೈತರಿಗೆ ಹಾಗೂ ಕೃಷಿಕರಿಗೆ ಅನುಕೂಲವಾಗುವಂತೆ ಇನ್ನೂ ಹೆಚ್ಚಿನ ಯೋಜನೆಗಳನ್ನು ತರುವುದಾಗಿ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯಾದ ಅಮೃತ ದೇಸಾಯಿ ರವರು, ಟಿ.ಎಸ್. ಪಾಟೀಲ ರವರು, ನಂದಿಗೋಳ ರವರು, ಜಕ್ಕಪ್ಪನವರ ರವರು, ಬಸವರಾಜ ಪಳೋಟಿ ರವರು, ಗುಡ್ಡದ ರವರು, ಚಿಕ್ಕನಗೌಡರ ರವರು, ಕೌಜಲಗಿ ರವರು, ದೀಪಕ ಸಂಕೋಜಿ ರವರು, ಭಾವಿಕಟ್ಟಿ ರವರು, ಸುರೇಬಾನ ರವರು, ಬೆಣ್ಣಿ ರವರು, ಬೆಂಡಿಗೇರಿ ರವರು, ಭಾರತೀಯ ಜನತಾ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಸ್ತ ಬಾಂಧವರು ಉಪಸ್ಥಿತರಿದ್ದರು.