ಸ್ಥಳೀಯ ಸುದ್ದಿ
ದ್ಯಾಮವ್ವ ದುರ್ಗಮ್ಮ ತಾಯಿ ಪಲಕ್ಕಿ ಉತ್ಸವ ಮೆರವಣಿಗೆ
ಧಾರವಾಡ
ಧಾರವಾಡ ಕಮಲಾಪುರ ಹರಿಜನಕೇರಿ ದ್ಯಾಮವ್ವ ದುರ್ಗಮ್ಮ ಜಾತ್ರಾ ಮಹೋತ್ಸವ ಅಂಗವಾಗಿ ಪಲಕ್ಕಿ ಉತ್ಸವ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ಧಾರವಾಡ ಕಮಲಾಪುರ, ಮಾಳಾಪುರ ಸೇರಿದಂತೆ ವಿವಿಧ ಕಡೆಗಳಲ್ಲಿ ಪಲಕ್ಕಿ ಉತ್ಸವ ಸಂಚರಿಸಿದ್ದು ಭಯ ಭಕ್ತಿ ಭಾವದಿಂದ ಭಕ್ತರು ಭಕ್ತಿ ಸೇವೆ ಸಮರ್ಪಣೆ ಮಾಡಿದರು.
ಸಕಲ ವಾದ್ಯ ಮೇಳ ಜೋತೆ ಸಾಗಿದ ಉತ್ಸವ ದ್ಯಾಮವ್ವ ತಾಯಿ ದುರ್ಗಮ್ಮ ತಾಯಿ ಜಾತ್ರಾ ಮಹೋತ್ಸವದಲ್ಲಿ ಸುತ್ತ ಮುತ್ತಲಿನ ವಿವಿಧ ಕಡೆಗಳ ಜನರು ಭಾಗವಹಿಸಿದ್ದರು.