ದೇಶ ಭಕ್ತರಿಗೆ ಅವಮಾನಿಸಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ : ಜೋಶಿ
ಎಂ ಇ ಎಸ್ ಕಾರ್ಯಕರ್ತರು ಹೊತ್ತಿಸಿದ ಕಿಡಿಯ ಕುರಿತು.
ನವದೇಹಲಿ : ಬೆಳಗಾವಿ ಹಾಗೂ ಬೆಂಗಳೂರಿನಲ್ಲಿ ನಡೆದ ಘಟನೆಗಳ ಕುರಿತಂತೆ.ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಸಿದ್ದು ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಿಕೊಳ್ಳಲು ಎಲ್ಲಾ ಅಗತ್ಯ ಕ್ರಮಗಳನ್ನು, ತೆಗೆದುಕೊಳ್ಳಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಿದ್ದೇನೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ರಾಷ್ಟ್ರ ನಾಯಕ ಶಿವಾಜಿ ಪ್ರತಿಮೆಗೆ ಮಸಿ ಬಳಿದಿರುವುದು, ಹಾಗೂ ಬೆಳಗಾವಿಯಲ್ಲಿ ನಾಡು ರಕ್ಷಕ ರಾಯಣ್ಣನ ಪ್ರತಿಮೆಯ ಭಗ್ನ, ಹಾಗೂ ಸರಕಾರಿ ವಾಹನಗಳಿಗೆ ಬೆಂಕಿ ಹಚ್ಚಿದ್ದರ ಪ್ರಕರಣಕ್ಕೆ ಸಂಬಂಧಪಟ್ಟಂತೆ, ನಮ್ಮ ಸರ್ಕಾರ ಯಾವುದೆ ಸಂಧರ್ಭದಲ್ಲೂ ಇಂತಹ ಹೇಯ ಕರ ಘಟನೆಗಳನ್ನು ಸಹಿಸುವುದಿಲ್ಲ.
ಸರ್ಕಾರ ಕಾನೂನು ಸುವ್ಯವಸ್ಥೆಗೆ ಭಂಗ ತರುವವರಿಗೆ ಅವಕಾಶ ನೀಡಲ್ಲ. ದೇಶಭಕ್ತರಿಗೆ ಗೌರವ ಕೊಡಬೇಕದಾದ್ದು ಪ್ರತಿಯೋಬ್ಬ ಭಾರತೀಯನ ಕರ್ತವ್ಯ ಎಂದು ನಾನು ಎಲ್ಲರಲೂ ಮನವಿ ಮಾಡುತ್ತೇನೆ , ಸಂಗೊಳ್ಳಿ ರಾಯಣ್ಣ, ಶಿವಾಜಿ ಮಹಾರಾಜ್ ಇಬ್ಬರೂ ದೇಶಭಕ್ತರು. ಇವರು ಭಾಷೆ, ಸಮುದಾಯ ಎಲ್ಲವನ್ನೂ ಮೀರಿ ಬೆಳೆದವರು. ಇಂಥವರ ಪ್ರತಿಮೆಗಳಿಗೆ ಮಸಿ ಬಳಿಯುವಂತಹ ಹೀನ ಕೃತ್ಯಕ್ಕೆ ಇಳಿಯಬಾರದು ಎಂದೂ ಜೋಶಿ ಬೇಸರ ವ್ಯಕ್ತಪಡಿಸಿದ್ದಾರೆ.
ಇಂತಹ ಕೃತ್ಯಗಳು ನಡೆದಾಗ ರಾಜಕೀಯ ವ್ಯಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುವ ಕೃತ್ಯಕ್ಕೆ ಕೈ ಹಾಕಬಾರದು ಎಂದೂ ಜೋಶಿ ಹೇಳಿದ್ದಾರೆ.
ಸಾಮಾಜಿಕ ಸಾಮರಸ್ಯ, ಶಾಂತಿ ಕದಡುವ ಪ್ರಯತ್ನ ಇದಾಗಿದೆ. ಸರಕಾರ ಇಂಥವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಗಳ ಮುಖೇನ ಸೂಚಿಸಲಾಗಿದೆ ಎಂದಿದ್ದಾರೆ.