ಧಾರವಾಡ

ದಿನದಿಂದ ದಿನಕ್ಕೆ ಕ್ರಿಟಿಕಲ್ ಆಗುತ್ತಿದೆ ಡಾ.ಚೆನ್ಮವೀರ ಕಣವಿ ಅವರ ಆರೋಗ್ಯ

ಧಾರವಾಡ

ಧಾರವಾಡದ ಹೆಸರನ್ನು ಬೆಳಗಿಸಿದ ಕವಿ.ನಾಡೋಜ ಡಾ.ಚೆನ್ನವೀರ ಕಣವಿ ಆರೋಗ್ಯ ದಿನದಿಂದ ದಿನಕ್ಕೆ ತುಂಬಾನೆ ಕ್ರಿಟಿಕಲ್ ಆಗುತ್ತಾ ಹೋಗುತ್ತಿದೆ.

ಮಂಗಳವಾರ ಸಂಜೆ ಎಸ್.ಡಿ.ಎಂ ಆಸ್ಪತ್ರೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್

ಎಸ್.ಡಿ.ಎಂ ಆಸ್ಪತ್ರೆಯಲ್ಲಿರುವ ಡಾ.ಚೆನ್ನವೀರ ಕಣವಿ ಅವರನ್ನು ನೋಡಲು ಇಂದು ಮಧ್ಯಾಹ್ನ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗಮಿಸಿದ್ದರು.

ಪ್ರಹ್ಲಾದ ಜೋಶಿ ಅವರು ವೈದ್ಯರೊಂದಿಗೆ ಕಣವಿ ಅವರ ಆರೋಗ್ಯದ ಬಗ್ಗೆ ಚರ್ಚೆ ನಡೆಸಿ, ಗುಣಮುಖರಾಗುವಂತೆ ಮ್ಯಾಕ್ಸಿಮಮ್ ಪ್ರಯತ್ನ ‌ಮಾಡಿ ಎಂದು ವೈದ್ಯರಿಗೆ ತಿಳಿಸಿದ್ರು.

ಇದೇ ಸಂದರ್ಭದಲ್ಲಿ ಕಣವಿ ಅವರ ಕುಟುಂಬದವರೊಂದಿಗೆ ಮಾತುಕತೆ ನಡೆಸಿದ್ರು.

2 ದಿನದ ಹಿಂದೆಯಷ್ಟೇ ಸಿಎಂ ಬಸವರಾಜ ಬೊಮ್ಮಾಯಿ ಆಸ್ಪತ್ರೆಗೆ ಬಂದು ಕಣವಿ ಅವರ ಆರೋಗ್ಯ ವಿಚಾರಿಸಿದ್ದರು.

ಇದಕ್ಕೂ ಮೊದಲು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪಾ ಆಚಾರ ಹಾಗೂ ಜವಳಿ, ಕೈಮಗ್ಗ ಮತ್ತು ಸಕ್ಕರೆ ಇಲಾಖೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರು ಆರೋಗ್ಯ ವಿಚಾರಿಸಿ ವೈದ್ಯರೊಂದಿಗೆ ಚರ್ಚಿಸಿದ್ದರು.

ಮಾಜಿ ಸಿಎಂ ಜಗದೀಶ ಶೆಟ್ಟರ ಅವರು ಕೂಡ ವೈದ್ಯರೊಂದಿಗೆ ಚರ್ಚಿಸಿ ಗುಣಮುಖರಾಗಲು ಅಗತ್ಯ ಕ್ರಮದ ಜೋತೆಗೆ ಅತ್ಯಾಧುನಿಕ ಉಪಕರಣಗಳ ಬಳಕೆಗ ಸಲಹೆ ಕೂಡ ನೀಡಿದ್ದರು.

ಇಂದು ಮಂಗಳವಾರ
ಸಂಜೆಯ ಹೊತ್ತಿಗೆ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ‌ಶಾಸಕ ಅರವಿಂದ‌ ಬೆಲ್ಲದ ಅವರು ನೇರವಾಗಿ ಬೆಂಗಳೂರಿನಿಂದ ಧಾರವಾಡಕ್ಕೆ ಆಗಮಿಸಿ ಕಣವಿ ಆರೋಗ್ಯದ ಬಗ್ಗೆ ವೈದ್ಯರಲ್ಲಿ ಹಾಗೂ ಕುಟುಂಬಸ್ಥರಲ್ಲಿ ಚರ್ಚೆ ಮಾಡಿದ್ರು.

94 ವರ್ಷ ವಯಸ್ಸಿನ ಕಣವಿ ಅವರು ಆದಷ್ಟು ಬೇಗ ಚೇತರಿಸಿಕೊಂಡು ಹೊರಗೆ ಬರಲಿ.

ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಕಣವಿ ಅವರು ಚೇತರಿಸಿಕೊಳ್ಳುತ್ತಿದ್ದರು. ಆದರೆ, ಈಗ ಎರಡು-ಮೂರು ದಿನಗಳಲ್ಲಿ ಅವರ ಆರೋಗ್ಯ ಕ್ಷೀಣಿಸಿರುವುದು ಬೇಸರದ ಸಂಗತಿ ಎಂದು ಅರವಿಂದ ಬೆಲ್ಲದ ಹೇಳಿದ್ರು.

ಈ ಸಂದರ್ಭದಲ್ಲಿ
ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಕಪಟಕರ, ಮಂಡಲ ಅಧ್ಯಕ್ಷ ‌ಬಸವರಾಜ ಗರಗ, ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ಜ್ಯೋತಿ ಪಾಟೀಲ, ವಿಷ್ಣು ಕೊರ್ಲಹಳ್ಳಿ, ನೀಲವ್ವ ಅರವಾಳ, ಅನಿತಾ ಮಾಳವದಕರ, ಮುಖಂಡರಾದ ದೇವರಾಜ ಶಹಪೂರ, ಮಂಜು ಇಂಗನಹಳ್ಳಿ ಮತ್ತಿತರರು ಜೊತೆಗಿದ್ದರು.

ಚೆಂಬೆಳಕಿನ ಕವಿ ಆದಷ್ಟು ಬೇಗ ಗುಣಮುಖರಾಗಿ ಬರಲೆಂದು ಪವರ ಸಿಟಿ‌ನ್ಯೂಸ್ ಕನ್ನಡದಿಂದಲೂ ಕೂಡ ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ.

Related Articles

Leave a Reply

Your email address will not be published. Required fields are marked *