ದಂಡ ಕಟ್ಟಿ ಮುಂದೆ ಹೋಗಿ!
ಹುಬ್ಬಳ್ಳಿ
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ರಸ್ತೆಗಳು ಸರಿ ಇಲ್ದಿದ್ರೂ ವಾರಕ್ಕೊಂದೆರಡು ಬಾರಿ ಪೋಲಿಸರಿಗೆ ದಂಡ ಕಟ್ಟುವ ರೂಢಿ ಮಾತ್ರ ತಪ್ಪೋಲ್ಲ ಎಣಿಸಿದೆ.
ಹೌದು ಹುಬ್ಬಳ್ಳಿಯಲ್ಲಿ ಕ್ರೈಂ ತಡೆಗಳಿಗಿಂತ ವಾಹನ ಸಂಚಾರಿ ನಿಯಮ ಉಲ್ಲಂಘನೆಯ ಕೆಸ್ ಗಳು ಮಾತ್ರ ವಾಹನ ಸವಾರರಿಗೆ ಇನ್ನಿಲ್ಲದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಆದರೆ ಕಾನೂನು ಎಲ್ಲರಿಗೂ ಒಂದೆ ಎನ್ನುವ ಪೊಲಿಸರ ಧೃಡ ನಿರ್ಧಾರ ಮಾತ್ರ ಸ್ವಾಗತಾರ್ಹವಾಗಿದೆ.
ಆದರೆ ಬಡ ವಾಹನ ಸವಾರರು ಸಣ್ಣದೊಂದು ತಪ್ಪಿಗೂ ಸಹ ಫೈನ್ ಕಟ್ಟುತ್ತಲೆ ಮುಂದೆ ಸಾಗುತ್ತಿದ್ದಾರೆ.
ಅಲ್ಲಲ್ಲಿ ದ್ವಿಚಕ್ರ ವಾಹನಗಳನ್ನು ತಡೆದು ನಿಲ್ಲಿಸಿ ಕೆಲವು ಕಡೆಗಳಲ್ಲಿ ತಪಾಸಣೆಯು ನಡೆಸದ ಪೊಲಿಸ್ ಸಿಬ್ಬಂದಿಗಳು 500ರೂ.ದಂಡದ ಪಾವತಿ ಗೆ ಸಹಿ ಹಾಕಿದ್ರೆ ಸಾಕು ಯಾವುದೆ ದಾಖಲೆಗಳನ್ನು ಕೂಡ ನೋಡದೆ ಕೇವಲ ದಂಡ ವಸೂಲಿಗಾಗಿಯೆ ನಿಂತಿರುವಂತೆ ವರ್ತಿಸುತ್ತಿದ್ದು ಇದು ಮೇಲಧಿಕಾರಿಗಳ ಒತ್ತಡವೆ ಎನ್ನುವ ಅನುಮಾನ ಪ್ರಜ್ಙಾವಂತ ನಾಗರಿಕರ ಪ್ರಶ್ನೆ ಯಾಗಿದೆ.
ಹೌದು ನಗರದ ಸರ್ಕಿಟ್ ಹೌಸ್ ಬಳಿಯ ವೃತ್ತದಲ್ಲಿ ಸಿವಿಲ್ ಡ್ರೇಸ್ ಮೇಲೆ ವಾಹನ ತಪಾಸಣೆಗೆ ಮುಂದಾಗಿರುವ ಉಪನಗರ ಪೊಲಿಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಮಂಜುನಾಥ ಅಕ್ಕಡಿ ನಡೆದು ಕೊಳ್ಳುವ ಇಬ್ಬಗೆಯ ರೀತಿಯೆ ಹಾಗಿತ್ತು.
ತಮಗೆ ಪರಿಚಯದ ವಾಹನ ಸವಾರ ಬಂದರೆ ಗೌರವದಿಂದ ಮುಂದೆ ಕಳಿಸಿ ಇನ್ಯಾವುದೋ ಬೈಕ್ ಸವಾರ ಸಿಕ್ರೆ ವಾಹನ ಸೈಡಿಗೂ ಹಾಕಿಸದೆ ವಾಹನ ಕೀ ತೆಗೆದುಕೊಂಡು ಕಿರಿ ಕಿರಿ ಮಾಡುವ ನಡೆಯನ್ನ ಪ್ರಶ್ನಿಸುವ ಧೈರ್ಯ ಸಾರ್ವಜನಿಕರಂತು ತೊರಲಿಲ್ಲ ಬಿಡಿ.
ಒಂದು ವೇಳೆ ಕಾನೂನು ಪಾಲಕ ಪೊಲೀಸರೆ ಸಂಚಾರಿ ನಿಯಮ ಉಲ್ಲಂಘಿಸಿದರೆ ಅಂಥವರ ಮೇಲೆ ಹಿರಿಯ ಪೊಲಿಸ್ ಅಧಿಕಾರಿಗಳು ತೆಗೆದು ಕೊಳ್ಳ ಬಹುದಾದ ಕ್ರಮವನ್ನ ಕಾದು ನೊಡಬೆಕಿದೆ.