ತಾಯಿ ಮಗಳ ನಡುವೆ ಜಾಣರಾದ ಪೊಲಿಸರು!
ಹುಬ್ಬಳ್ಳಿ:
ಸಿದ್ದನ ಗೌಡ ಪಾಟೀಲ ಎಂಬ ಪ್ರಯಾಣಿಕರೊಬ್ಬರು ಪತ್ನಿ ಹಾಗೂ ಮಗಳೊಂದಿಗೆ
ನರಗುಂದ ದಿಂದ ಹುಬ್ಬಳ್ಳಿ ತಾಲ್ಲೂಕಿನ ತಮ್ಮ ಊರಾದ ಅರಳಿ ಕಟ್ಟಿ ಗ್ರಾಮಕ್ಕೆ ತೆರಳಲು. ಹುಬ್ಬಳ್ಳಿಯ ಬಸ್ ನಿಲ್ದಾಣಕ್ಕೆ ಬಂದಿದ್ದರು.
ಅಷ್ಟರಲ್ಲೇ ಹಣ ಒಡವೇ ಗಳಿದ್ದ ಬ್ಯಾಗ್ ಯಾರೋ ಕಳ್ಳತನ ಮಾಡಿದ್ರು ಎನ್ನುವುದನ್ನ ತಿಳಿದ ಮಹೀಳೆ ಅದನ್ನ ಹುಡುಕಲು ಬಸ್ಟ್ಯಾಂಡಿನ ಎಲ್ಲ ವಿಭಾಗಗಳಲ್ಲಿ ಹುಡುಕುತ್ತಿದ್ದಳು. ಬೇಗ ಸಿಗದಿದ್ದಾಗ ನಿರಾಸೆಯಾಗಿ ಕಣ್ಣೀರು ಹಾಕುತ್ತಿದ್ದಳು.
ಇನ್ನೇನು ಬಂಗಾರದ ಒಡವೆಗಳಿದ್ದ ಬ್ಯಾಗ್ ಯಾರ್ದೋ ಪಾಲಾಯ್ತೆಂದು ಅಳುತ್ತ ಕುಳಿತ ಮಹಿಳೆಯನ್ನು ವಿಚಾರಿಸಿದ ಕರ್ತವ್ಯ ನಿರತ ವಿದ್ಯಾನಗರ ಠಾಣೆಯ ಎಎಸ್ಐ ಮಹೇಶ ದೊಡಮನಿ ಹಾಗೂ ಮುಖ್ಯಪೇದೆ ಜೋಗೆರ್ ವಿಷಯ ಅರಿತು .
ತಕ್ಷಣ ನಿಮ್ಮೂರು ಯಾವುದು ಎಂದು ಕೇಳಿ ಮಹೀಳೆ ಪ್ರಯಾಣಿಸಿದ ವಿವರ ಪಡೆದ ಪೊಲೀಸರು. ಅರಳಿಕಟ್ಟಿಗೆ ಹೋಗುವ ಬಸ್ ಹತ್ತಿ ಮಾಹಿತಿ ಕಲೆ ಹಾಕುತ್ತಿರುವಾಗಲೇ ವಿಷಯ ತಿಳಿದಿತ್ತು.
ಅರಳಿಕಟ್ಟಿ ಬಸ್ಸಿನ ಸೀಟ್ ಮೇಲೆ ಮಹೀಳೆಯ ಪುಟ್ಟ ಮಗಳು ತಾಯಿಯ ವ್ಯಾನಿಟಿ ಬ್ಯಾಗ್ ಇಟ್ಟುಕೊಂಡು ಬಸ್ ಸೀಟಿನಲ್ಲಿ ಕುಳಿತಿದ್ದಳು.
ಪೊಲೀಸರು ಮಗುವನ್ನ ಬ್ಯಾಗ್ ಸಮೇತ ಕರೆದುಕೊಂಡು ಬಂದ ಪೊಲಿಸರು ಮಹೀಳೆಗೆ ಆಕೆಯ ಕಂದಮ್ಮನ ಸಹೀತ ಸುಮಾರು 2 ವರೆ ತೊಲೆ ಬಂಗಾರ (ಕಿವಿಯೊಲೆ ನೆಕಲೆಸ್ ಸಹಿತ) ಒಂದು ಮೋಬೈಲ್ ಹಾಗೂ 1200 ನಗದು ಪತ್ತೆ ಮಾಡಿ ತಾಯಿಗೆ ಕೊಟ್ಟಿದ್ದಾರೆ..
ಇದರಿಂದ ಬಂಗಾರ ಕಳೆದು ಹೋಗಿದೆ ಎನ್ನುವ ಮಹಿಳೆಯ ಆತಂಕವನ್ನು ಪೊಲೀಸರು ದೂರು ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ಸಿಬ್ಬಂದಿಗಳಾದ ಶಿವಾನಂದ ಮತ್ತು ನದಾಫ ಇನ್ನಿತರು ಇದ್ದರು..
ಮೊದಲೇ ಕಳ್ಳತನ ಪ್ರಕರಣ ಗಳು ಜಾಸ್ತಿಯಾಗುತ್ತಿರುವ ಸಂದರ್ಭದಲ್ಲಿ ನನ್ನ ಬೆಲೆಬಾಳುವ ಬಂಗಾರ ಸಿಕ್ಕಿತಪ್ಪಾ ಎಂದು ಮಹಿಳೆ ಇದೀಗ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಆಗಿದೆ.