ಸ್ಥಳೀಯ ಸುದ್ದಿ

ತನಿಖಾ ವರದಿಗೆ ಮತ್ತೊಂದು ಹೆಸರು‌ ಆನಂದ‌ ಸೌದಿ

ವಿಜಯಪೂರ

ವಿಜಯಪುರ ಜಿಲ್ಲೆಯಲ್ಲಿ ನಡೆದ 37 ನೇ ಪತ್ರಕರ್ತರ ಸಮ್ಮೇಳನದಲ್ಲಿ ಅತ್ಯುತ್ತಮ ತನಿಖಾ ವರದಿಗಾರಿಕೆಗಾಗಿ
ಯಾದಗಿರಿ ಜಿಲ್ಲೆಯ ಕನ್ನಡಪ್ರಭದ ಪತ್ರಿಕೆಯ ಹಿರಿಯ ವರದಿಗಾರ ಆನಂದ ಎಂ.ಸೌದಿ ಅವರಿಗೆ ಪ್ರಶಸ್ತಿ‌ ನೀಡಿ ಗೌರವಿಸಲಾಗಿದೆ.

ಕೆಪಿಸಿಸಿ ಪ್ರಚಾರ ಸಮಿತಿ‌ ಅಧ್ಯಕ್ಷರಾದ ಎಂ.ಬಿ.ಪಾಟೀಲ ಪತ್ರಕರ್ತರಿಗೆ ಪ್ರಶಸ್ತಿ‌ ಕೊಟ್ಟು, ಸನ್ಮಾನಿಸಿ ಗೌರವಿಸಿದ್ರು.

ಪಿಎಸ್ಐ ಹಗರಣದ ಮೂಲವನ್ನು ಎಳೆ ಎಳೆಯಾಗಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಬ್ಲಾಸ್ಟಿಂಗ್ ಸ್ಟೋರಿ ರೀತಿಯಲ್ಲಿ ಸರಣಿ ಲೇಖನ ಪ್ರಕಟ ಮಾಡಿದ‌ ಕೀರ್ತಿ ‌ಆನಂದ ಸೌದಿ ಅವರಿಗೆ ಸಲ್ಲುತ್ತೆ.

545 ಪಿಎಸ್ಐ ನೇಮಕಾತಿ ಹಗರಣ ಸದನದಲ್ಲೂ ಚರ್ಚೆ‌ ಆಗಿದ್ದು, 55 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರ ಭವಿಷ್ಯಕ್ಕೆ ದಾರಿದೀಪವಾಗಿದೆ.‌

ಅವರ ಪ್ರಾಮಾಣಿಕ ಹಾಗೂ ಧೈರ್ಯದ ಲೇಖನಕ್ಕೆ ರಾಜ್ಯದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಹಾಗೂ ಪದಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭದ ಬೆಂಗಳೂರಿನ ‌ಕ್ರೀಡಾ ವರದಿಗಾರ ಸ್ಪಂದನ್ ಕಣಿಯಾರ್, ಮೈಸೂರು‌ ವರದಿಗಾರ ಎಲ್.ಎಸ್.ಶ್ರೀಕಾಂತ್ ಅವರಿಗೂ ಪ್ರಶಸ್ತಿ‌ ‌ಕೊಟ್ಟು ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಯಾದಗಿರಿ‌ ಜಿಲ್ಲೆಯ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಪ್ಪಾ ಸಂಕೀನ್ ಸೇರಿದಂತೆ ರಾಜ್ಯದ ವಿವಿಧ ಕ್ಷೇತ್ರದಲ್ಲಿ ಉತ್ತಮ ವರದಿ‌ ಪ್ರಕಟಿಸಿದ ಪತ್ರಕರ್ತರಿಗೆ ಪ್ರಶಸ್ತಿ ಕೊಟ್ಟು ಗೌರವಿಸಲಾಯಿತು.

ಆನಂದ ಸೌದಿ ಅವರು, ಆರೋಗ್ಯ‌ಇಲಾಖೆಯ ನಿವೃತ್ತ‌ ಜಂಟಿ‌ ನಿರ್ದೇಶಕರಾಗಿದ್ದ ದಿವಂಗತ ‌ಶ್ರೀ‌ಮಧುಸೂದನ ಸೌದಿ ಅವರ ಸುಪುತ್ರರಾಗಿದ್ದು, ಇವರ ಹಿರಿಯ‌ ಸಹೋದರ ಶ್ರೀ‌ಅಪ್ಪಾರಾವ್ ಸೌದಿ‌ ಅವರು ಬೀದರ್ ಜಿಲ್ಲೆಯ ಕನ್ನಡಪ್ರಭದ ಹಿರಿಯ ವರದಿಗಾರರಾಗಿ‌‌ ಸೇವೆ‌ ಸಲ್ಲಿಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *