ಡಿಸಿಪಿ ರಾಮರಾಜನ್ ವರ್ಗಾವಣೆ: ಏಕಾಏಕಿ ನಿರ್ಧಾರಕ್ಕೆ ಕಾರಣ ಆದ್ರೂ ಏನು…?
ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಕಾನೂನ ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ ಸೇವೆ ಸಲ್ಲಿಸುತ್ತಿದ್ದ ಕೆ.ರಾಮರಾಜನ್ ಅವರನ್ನು ಬೆಂಗಳೂರು ಕಮಾಂಡೆಂಟ್ ಸೆಂಟರ್ ಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಹುಬ್ಬಳ್ಳಿ-ಧಾರವಾಡಕ್ಕೆ ನೂತನ ಪ್ರಭಾರ ಡಿಸಿಪಿಯಾಗಿ ಸಾಹಿಲ್ ಭಾಗ್ಲಾ ಎಂಬುವವರಿಗೆ ಜವಾಬ್ದಾರಿ ವಹಿಸಿ ಆದೇಶಿಸಲಾಗಿದೆ. ಇನ್ನೂ ಗಾಂಜಾ ಕೇಸಿನ ತನಿಖಾ ಅಧಿಕಾರಿಯಾಗಿದ್ದರ ಹಿನ್ನೆಲೆ ಮತ್ತು ಮತಾಂತರ ಆರೋಪದ ಕೇಸ್ ಗೆ ಡಿಸಿಪಿ ವರ್ಗಾವಣೆಯಾದರಾ..? ಎಂಬುವಂತ ಅನುಮಾನ ವ್ಯಕ್ತವಾಗುತ್ತಿದೆ.
ಅದೆ ಎಪಿ ಎಂ ಸಿ ಠಾಣೆಯಲ್ಲಿ ನಡೆದ ಎರಡು ಕೆಜಿ ಗಾಂಜಾ ದೊಂದಿಗೆ ಆಟೋ ಬೈಕ್ ಗಳ ಸಮೇತ ಐವರು ಆರೋಪಿಗಳ ಠಾಣೆಗೆ ಕರೆತಂದು ಅದೆ ರಾತ್ರೀ ಮತ್ತೆ ಬಿಟ್ಟು ಕಳಿಸಿದ್ದ ಆರೋಪದಲ್ಲಿ ತನಿಖಾ ಧಿಕಾರಿಯಾಗಿದ್ದ ಕೆ ರಾಮ ರಾಜನ್ ವರದಿ ಆಧರಿಸಿ ಎಳು ಪೊಲಿಸರನ್ನ ಅಮನಾತ್ತು ಮಾಡಿದ್ದರು. ಆದರೆ ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿರುವಾಗಲೆ ಡಿಸಿಪಿಗೆ ಮಾತ್ರ ಭಾರಿ ಒತ್ತಡಗಳು ಇದ್ದವಂತೆ ಯಾರ ಒತ್ತಡಕ್ಕೂ ಮಣಿಯದಿದ್ದಾಗಲೆ ಅದೆ ಠಾಣೆಯಲ್ಲಿ ಮತಾಂತರದ ವಿಷಯಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ಹು-ಧಾ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರು, ಡಿಸಿಪಿ ವಿರುದ್ಧ ಆರೋಪಿಸಿದ್ದರು. ಖುದ್ದು ಡಿಸಿಪಿಯೇ ಆರೋಪಿಯನ್ನ ಬಿಟ್ಟು ಕಳಿಸಿದ್ದಾರೆಂದು ಆರೋಪಿಸಿ ಪ್ರತಿಭಟಿಸಿದ್ದರು. ಇದಾದ ಕೆಲವು ದಿನಗಳಲ್ಲಿಯೇ ಡಿಸಿಪಿಯಾಗಿದ್ದ ರಾಮರಾಜನ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಡಿಸಿಪಿ ವಿರುದ್ಧ ಆಡಳಿತ ಪಕ್ಷದವರೇ ಹರಿಹಾಯ್ದಿದ್ದರು. ಅದೇ ಕಾರಣಕ್ಕೆ ಡಿಸಿಪಿಯವರನ್ನ ವರ್ಗಾವಣೆ ಮಾಡಲಾಯಿತೇ ಎಂಬುವಂತಹ ಚರ್ಚೆಗಳೂ ಸಾರ್ವಜನಿಕವಾಗಿ ನಡೆಯುತ್ತಿವೆ.