ಜೆಡಿಎಸ್ ಪಕ್ಷದಲ್ಲಿ ಗಿರೀಶ ಪೂಜಾರಗೆ ಮಹತ್ವದ ಸ್ಥಾನಮಾನ
ಧಾರವಾಡ
ಧಾರವಾಡ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಬೆಳವಣಿಗೆಗೆ ಶ್ರಮವಹಿಸಿ ದುಡಿಯುತ್ತಿರುವ ಉತ್ಸಾಹಿ ಯುವಕ ಗಿರಿಶ ಪೂಜಾರ್ ಅವರಿಗೆ ಪಕ್ಷದಲ್ಲಿ ಉತ್ತಮ ಸ್ಥಾನ ಮಾನ ಕೊಡಲಾಗಿದೆ.
ಜೆಡಿಎಸ್ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಕನ್ನಡಪರ ಹೋರಾಟಗಾರ ಗಿರೀಶ್ ಪೂಜಾರ ಅವರನ್ನು ಈ ಕೂಡಲೇ ಜಾರಿಗೆ ಬರುವಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಜನತಾದಳ (ಜಾತ್ಯತೀತ) ಪಕ್ಷದ ಜಿಲ್ಲಾ ವಕ್ತಾರನ್ನಾಗಿ ನೇಮಕ ಮಾಡಿ ಆದೇಶಿಸಲಾಗಿದೆ.
ಈ ಬಗ್ಗೆ ಜೆಡಿಎಸ್ ಪಕ್ಷದಿಂದ ಅಧಿಕೃತವಾಗಿ ಆದೇಶ ಪತ್ರ ನೀಡಲಾಗಿದೆ.
ತಾವು ಈ ಒಂದು ಗುರುತರವಾದ ಜವಾಬ್ದಾರಿ ಸ್ಥಾನವನ್ನು ಅಲಂಕರಿಸಿ ಪಕ್ಷದ ಶಿಸ್ತು ಹಾಗೂ ಸಿದ್ದಾಂತಗಳ ಅಡಿಯಲ್ಲಿ ಪಕ್ಷವನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲೆಯಲ್ಲಿ ಸಧೃಡವಾಗಿ ಕಟ್ಟಲು ತಾವು ಶ್ರಮಿಸುತ್ತಿರಿ ಎಂದು ನಂಬಿ ತಾವುಗಳು ಈ ಮೂಲಕ ತಕ್ಷಣದಿಂದಲೆ ಸಂಘಟನೆಯಲ್ಲಿ ತೋಡಗಿಕೊಳ್ಳುವಂತೆ ಕೋರುತ್ತೇನೆ ಎಂದು, ಜೆಡಿಎಸ್ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷರಾದ
ಗುರುರಾಜ ಹುಣಸಿಮರದ ಅಭಿನಂದನೆ ಸಲ್ಲಿಸಿದ್ದಾರೆ.
ಗಿರೀಶ ಪೂಜಾರ ಪಕ್ಷ ಸಂಘಟನೆಗೆ ಒತ್ತು ನೀಡುತ್ತಿದ್ದು, ಕಲಘಟಗಿ ಮತಕ್ಷೇತ್ರದ ಸೇವಾ ಕಾಂಕ್ಷಿಯಾಗಿದ್ದಾರೆ.