ಸ್ಥಳೀಯ ಸುದ್ದಿ
ಜೂನ್ 17 ಕ್ಕೆ ರಕ್ತದಾನ ಶಿಬಿರ ಆಯೋಜನೆ
ಧಾರವಾಡ
ಆಲ್ ಇಂಡಿಯಾ ಮೊಬೈಲ್ ರಿಟೆಲರ್ ಅಸೋಸಿಯೇಷನ್ ವತಿಯಿಂದ ಇದೇ ಜೂನ್ 17 ರಂದು ಬೃಹತ್ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿದೆ ಎಂದು ಧಾರವಾಡ ಜಿಲ್ಲಾ ಅಧ್ಯಕ್ಷ ಮೋಹನ್ ಹೂಗಾರ ತಿಳಿಸಿದ್ರು.
ರಕ್ತದ ಕೊರತೆ ರೋಗಿಗಳಿಗೆ ಸಮಸ್ಯೆಯಾಗಿದ್ದು, ಈ ಕೊರತೆಯನ್ನು ನಿಗಿಸಲು ನಮ್ಮ ಅಸೋಸಿಯೇಷನ್ ನಿಂದ ಈ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿದೆ ಎಂದರು.
ಈ ಶಿಬಿರದಲ್ಲಿ ಸುಮಾರು 250 ಮಂದಿ ರಕ್ತದಾನ ಮಾಡಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಪದಾಧಿಕಾರಿಗಳು ಇದ್ದರು