ಸ್ಥಳೀಯ ಸುದ್ದಿ

ಜಿಲ್ಲೆಯಲ್ಲಿ ಎತ್ತುಗಳನ್ನು ಖರೀದಿಸಿ ಮೋಸ ಮಾಡುವ ಗ್ಯಾಂಗ್

ಧಾರವಾಡ

ಧಾರವಾಡ ಜಿಲ್ಲೆಯಲ್ಲಿ ಎತ್ತುಗಳನ್ನು ಖರೀದಿಸಿ ಹಣ ಕೊಡದೇ ರೈತರಿಗೆ ಮೋಸ ಮಾಡುವ ತಂಡವೊಂದು ಧಾರವಾಡ ಜಿಲ್ಲೆಯಲ್ಲಿ ‌ಸಕ್ರಿಯವಾಗಿದೆ.

ಈ ತಂಡ ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ಇಬ್ಬರು ರೈತರಿಗೆ ಮೋಸ ಮಾಡಿದೆ.

ಯಾದವಾಡ ಗ್ರಾಮದ ರೈತ ಮಾಬೂಬಸಾಬ ದಿಡ್ಡಿ, ಹಾಗೂ ಫಕ್ರುಸಾಬ ಹುಡೇದ ಎನ್ನುವರಿಗೆ ಮೋಸ ಮಾಡಲಾಗಿದೆ.

ಮೋಸ ಮಾಡಿರುವ ವ್ಯಕ್ತಿ ದನಗಳನ್ನು ಖರೀದಿಸಿ ಮಾರಾಟ ಮಾಡುವ ದಲಾಲಿಕಿ‌ ಕೆಲಸ ಮಾಡುವವನಾಗಿದ್ದಾನೆ. ಈತ ಕಲಘಟಗಿ ತಾಲೂಕಿನ ಎಮ್ಮೆಟ್ಟಿ ಗ್ರಾಮದವನಾಗಿದ್ದಾನೆ.

ಚನ್ನೆಪ್ಪ ಕೂಡ ನಡುವೆ ಆಗಿ ಈ ಎತ್ತುಗಳ ಮಾರಾಟದ ವ್ಯವಹಾರದಲ್ಲಿ ತೊಡಗಿದ್ದಾನೆ.

ಈತನ ವಿರುದ್ದ ಇದೀಗ ಮೋಸ ಹೋದ ರೈತರು ಎಸ್ಪಿ ಕಚೇರಿಗೆ ದೂರು ಕೊಡಲು ಮುಂದಾಗಿದ್ದಾರೆ.

ಯಾದವಾಡದ ರೈತರಾದ ಮಾಬೂಲಿ ದಿಡ್ಡಿ ಅವರ ಹತ್ತಿರ 48 ಸಾವಿರದ ಜೋಡಿ ಎತ್ತುಗಳನ್ನು ಒಯ್ದು, ಕೆವಲ 26 ಸಾವಿರ ಮಾತ್ರ ಕೊಟ್ಟು ಉಳಿದ ಹಣಕ್ಕಾಗಿ ಪೀಡಿಸುತ್ತಿದ್ದಾನೆ ಅದು ಕೂಡ ಖರೀದಿಸುವಾಗ ನಯಾಪೈಸೆ ಕೊಟ್ಟಿರಲಿಲ್ಲಾ.

ಇದೇ ರೀತಿ ಫಕ್ರುಸಾಬ ಹುಡೇದ ಎನ್ನುವರ 1 ಎಮ್ಮೆ ಬೆಲೆ 45 ಸಾವಿರವಾಗಿದ್ದು, ಮುಂಗಡವಾಗಿ 20 ಸಾವಿರ ಕೊಟ್ಟು ಉಳಿದ ಹಣ ಕೊಡದೇ ಹೋಗಿದ್ದಾನೆ.

ಧಾರವಾಡ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ರೈತರಿಗೆ ಈ ರೀತಿ ಆಗಿರುವ ಅನ್ಯಾಯವನ್ನು ಎಷ್ಟರ ಮಟ್ಟಿಗೆ ಸರಿ‌ಮಾಡಿಸಿ ಕೊಡ್ತಾರೆ ಎನ್ನುವುದನ್ನು‌ ನೊಂದ ರೈತರು ಕಾದು‌ ನೋಡುತ್ತಿದ್ದಾರೆ.

ಇದರ ಜೊತೆ ಜೋತೆಗೆ ಸಕ್ರಿಯವಾಗಿರುವ ಈ ಎತ್ತುಗಳ ಲೇವಾದೇವಿ ಮಾಡುವ ಗ್ಯಾಂಗ್ ಅನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕಿದೆ.

Related Articles

Leave a Reply

Your email address will not be published. Required fields are marked *