ಜಿಲ್ಲಾ ನ್ಯಾಯಾಲಯದಲ್ಲಿ ವಿಶ್ವ ಯೋಗ ದಿನ ಆಚರಣೆ
ಧಾರವಾಡ
ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ಇಂದು ಬೆಳಿಗ್ಗೆ ವಿಶ್ವ ಯೋಗ ದಿನ ಆಚರಿಸಲಾಯಿತು.
ಪ್ರಭಾರ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶೆ ಎಸ್. ನಾಗಶ್ರೀ ಅವರು ಯೋಗ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ಯೋಗ ಶಿಬಿರವು ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಮತ್ತು ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು.
ಕೇಂದ್ರ ಆಯುಷ ಇಲಾಖೆಯ ನಿರ್ದೇಶನಗಳನ್ವಯ ಯೋಗ ಅಭ್ಯಾಸ ಮಾಡಲಾಯಿತು. ನ್ಯಾಯವಾದಿ ಹಾಗೂ ಯೋಗ ಶಿಕ್ಷಕ ಸಂಜಯಕುಮಾರ ಹಡಗಲಿ ಅವರು ಯೋಗ ಶಿಬಿರ ನಡೆಸಿದರು.
ಯೋಗ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಸಿ.ಎಂ.ಪುಷ್ಪಲತ ಅವರು ನಿರ್ವಹಿಸಿದರು.
ಜಿಲ್ಲಾ ನ್ಯಾಯಾಧೀಶರಾದ ಎನ್.ಸುಬ್ರಹ್ಮಣ್ಯ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ಸಂಜಯ ಎಸ್ ಗುಡಗುಡಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಅಮೊಲ ಹಿರೆಕೋಡಿ, ಮಹೇಶಚಂದ್ರಕಾಂತ, ನಿತೀನ ಯಶವಂತರಾವ್, ಸಿವಿಲ್ ನ್ಯಾಯಾಧೀಶರಾದ ನೀಲಂ ನೀತಿನರಾವ್, ಗಿರೀಶ ಆರ್.ವಿ, ಮತ್ತು ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಾಳಿತಾಧಿಕಾರಿ ಕೆ.ಎನ್.ಮಾರಿಹಾಳಕರ, ಎರಡನೇಯ ಹೆಚ್ಚುವರಿ ಸರಕಾರಿ ವಕೀಲ ಬಿ.ಎಸ್.ಪಾಟೀಲ ಹಾಗೂ ಧಾರವಾಡ ವಕೀಲರ ಸಂಘದ ಅಧ್ಯಕ್ಷ ಸಿ.ಎಸ್.ಪೊಲೀಸಪಾಟೀಲ, ಕಾರ್ಯದರ್ಶಿ ಎನ್.ಆರ್.ಮಟ್ಟಿ ಸೇರಿದಂತೆ ನ್ಯಾಯಾಲಯದ ಅಧಿಕಾರಿಗಳು, ಸಿಬ್ಬಂದಿಗಳು, ನ್ಯಾಯವಾದಿಗಳು ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು.