ಸ್ಥಳೀಯ ಸುದ್ದಿ
ಜಾತ್ರೆಗೆ ಹೋಗಿದ್ದ ಸೈನಿಕ ಅಪಘಾತದಲ್ಲಿ ಸಾವು
ಧಾರವಾಡ
ನಾಗಪ್ಪ ಉದುಮೇಶಿ (27) ಎನ್ನುವ ಸೈನಿಕ ರಜೆ ಮೇಲೆ ಊರಿಗೆ ಬಂದಾಗ ಜಾತ್ರೆಗೆ ಹೋಗಿ ಬರುವಾಗ ಟ್ರ್ಯಾಕ್ಟರ್ ಮೆಲಿನಿಂದ ಬಿದ್ದು ತಲೆಗೆ ತೀವ್ರ ಗಾಯವಾಗಿ ಸಾವನ್ನಪ್ಪಿದ್ದಾನೆ.
ಗರಗದ ಶ್ರೀ ಮಡಿವಾಳೇಶ್ವರ ಜಾತ್ರೆಗೆ ಸ್ನೇಹಿತರೊಂದಿಗೆ ಹೋಗಿ ಹಿಂದುರುಗಿ ಬರುವಾಗ ಗರಗ-ಲೋಕೂರು ಕ್ರಾಸ್ ಬಳಿ ಟ್ರಾಕ್ಟರ್ ಮೇಲಿನಿಂದ ಬಿದ್ದು ಸೈನಿಕ ಸಾವನ್ನಪ್ಪಿದ್ದಾನೆ.
ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡ ಗ್ರಾಮಸ್ಥರಲ್ಲಿ ದುಃಖ ಮಡುಗಟ್ಟಿದೆ.
ಧಾರವಾಡ ತಾಲೂಕಿನ ಹಾರೊಬೆಳವಡಿ ಗ್ರಾಮದ ಮೃತ ಸೈನಿಕ ಈಗಾಗಲೇ ದೇಶದ ಹಲವಾರು ರಾಜ್ಯಗಳಲ್ಲಿ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದು, ಇನ್ನು 8 ವರ್ಷಗಳ ಸೇವೆ ಸಲ್ಲಿಸಬೇಕಿತ್ತು.
ಇತ್ತೀಗಷ್ಟೇ ಒಂದು ಮಗುವಿನ ತಂದೆಯಾಗಿದ್ದ ಸೈನಿಕ ಸಾವಿಗೆ ಈಡಿ ಊರಿಗೆ ಊರೆ ಮಮ್ಮಲ ಮರಗುತ್ತಿದೆ.
ಮೃತ ಸೈನಿಕನ ಕುಂಟುಬಸ್ಥರಿಗೆ ಮಾಜಿ ಸಚಿವರ ಪತ್ನಿ ಹಾಗೂ ಕಾಂಗ್ರೆಸ್ ಮುಖಂಡೆ ಶಿವಲೀಲಾ ಕುಲಕರ್ಣಿ ಸಾತ್ವಂನ ಹೇಳಿದ್ರು