ಸ್ಥಳೀಯ ಸುದ್ದಿ
ಜನಸ್ನೇಹಿ ಬಜೆಟ್: ಶಾಸಕ ಅಮೃತ ದೇಸಾಯಿ ಶ್ಲಾಘನೆ
ಧಾರವಾಡ
ಜನಸಾಮಾನ್ಯರಿಗೆ ಹಾಗೂ ಮಧ್ಯಮ ವರ್ಗಕ್ಕೆ ತೆರಿಗೆ ಭಾರ ಇಳಿಸುವ (ತೆರಿಗೆ ವಿನಾಯಿತಿ 5 ಲಕ್ಷದಿಂದ 7ಲಕ್ಷಕ್ಕೆ ಹೆಚ್ಚಳ) ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅತ್ಯುತ್ತಮ ಜನಸ್ನೇಹಿ ಬಜೆಟ್ ಮಂಡಿಸಿದ್ದಾರೆ ಎಂದು ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಜೆಟ್ ನಲ್ಲಿ ರೈತರಿಗೆ ಕೃಷಿ ಸಾಲ ಸೌಲಭ್ಯಗಳನ್ನು ಹೆಚ್ಚಳ ಮಾಡಲಾಗಿದೆ.
ಬರುವ ದಿನಗಳಲ್ಲಿ ಸಮೃದ್ಧ ಭಾರತ ನಿರ್ಮಾಣಕ್ಕೆ ಈ ಬಜೆಟ್ ಮುನ್ನುಡಿ ಬರೆಯಲಿದೆ.
ರೈತರು, ಮಹಿಳೆಯರು ಹಾಗೂ ದೀನದಲಿತರ ಪರವಾದ ಈ ಬಜೆಟ್ ಮಾದರಿಯಾಗಿದೆ ಎಂದು ಧಾರವಾಡ ಶಾಸಕರಾದ ಅಮೃತ ದೇಸಾಯಿ ಕೇಂದ್ರ ಬಜೆಟ್ ನ್ನು ಶ್ಲಾಘಿಸಿದ್ದಾರೆ.