
POWERCITY NEWS: HUBBALLI
ಹುಬ್ಬಳ್ಳಿ
ಯುವಕನೋರ್ವನನ್ನು ಮನಸ್ಸೋ ಇಚ್ಛೆ ಥಳಿಸಿದ ಗುಂಪೊಂದು ಸ್ಥಳದಿಂದ ಪರಾರಿಯಾದ ಘಟನೆ ನಿನ್ನೆ ರಾತ್ರಿ ಗಬ್ಬೂರಿನ ಪ್ರದೇಶದಲ್ಲಿ ನಡೆದಿದೆ.
ಥಳಿತದ ಏಟಿಗೆ ತೀವ್ರವಾಗಿ ಗಾಯಗೊಂಡಿದ್ದ ಯುವಕನನ್ನು ಗಬ್ಬೂರು ನಿವಾಸಿ ಸೋಮನಗೌಡ ಶಂಕರಗೌಡ ನಿಂಗನಗೌಡ (೨೪) ಎಂದು ಗುರುತಿಸಲಾಗಿದೆ. ಕ್ಷುಲಕ ಕಾರಣಕ್ಕೆ ಖ್ಯಾತೆ ತೆಗೆದ ಹೊನ್ನಪ್ಪ ಎಂಬಾತ ತನ್ನ ಸಹಚರರೊಂದಿಗೆ ಮನಸ್ಸೋ ಇಚ್ಛೆ ಥಳಿಸಿದ್ದರು ಎನ್ನಲಾಗಿದೆ.

ಆದರೆ ಘಟನೆಯಲ್ಲಿ ತಿವ್ರ ಗಾಯಗೊಂಡಿದ್ದ ಸೋಮನ ಗೌಡ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾನ್ಹ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳು ಘಟನೆ ಕುರಿತು ಪರಿಸಿಲನೆ ನಡೆಸಿದ್ದರ ಬೆನ್ನಲ್ಲೇ ಬೆಂಡಿಗೇರಿ ಪೊಲಿಸ್ ಠಾಣೆ ಇನ್ಸ್‌ಪೆಕ್ಟರ್ ಜೆ ಎ. ಪಾಟೀಲ್ ಅವರು ಗಬ್ಬೂರು ಪ್ರದೇಶದ ಪ್ರಭಾವಿ ಹಾಗೂ ಅನೇಕ ರಿಯಲ್ ಎಸ್ಟೇಟ್, ಅಕ್ರಮ ಬಡ್ಡಿ ದಂಧೆ, ಅಲ್ಲದೆ ಇಸ್ಪೀಟ್ ಅಡ್ಡೆ ಸೇರಿದಂತೆ ಅನೇಕ ಕಾನೂನು ಬಾಹೀರ ಚಟುವಟಿಕೆಗಳ ನಡೆಸುತ್ತ ತನ್ನದೆ ರೌಡಿ ಪಟಾಲಂ ಬೆಳೆಸಿಕೊಂಡಿದ್ದ ಎನ್ನಲಾದ ಹೊನ್ನಪ್ಪ ಕೊಂಗವಾಡ ಎನ್ನುವ ಆರೋಪಿಯನ್ನ ಬಂದಿಸಿ ವಿಚಾರಣೆ ನಡೆಸುತ್ತಿದ್ದಾರೆ.ಆದರೆ ಘಟನೆಗೆ ನಿಖರವಾದ ಕಾರಣ ಹುಡುಕುತ್ತಿರುವ ಪೊಲಿಸರು ಘಟನೆಯ ಕುರಿತು ಮಾಹಿತಿ ಕಲೆಹಾಕುತ್ತಿದ್ದು ಕೊಲೆಗೆ ಕಾರಾಣವಾದ ಇನ್ನಷ್ಟು ಆರೋಪಿಗಳಿಗೆ ಬಲೆಬಿಸಿದ್ದಾರೆ.
ಇತ್ತ ಕಿಮ್ಸ್‌ನ ಶವಾಗಾರದ ಬಳಿ ಮೃತನ ತಂದೆ ತಾಯಿ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ.
