ಜಡಿಯವರು ಜಡಿದಿದ್ದರಿಂದಲೇ ನಾ ಒಲ್ಲೆ ಎಂದ ಕರಿಯಮ್ಮ ದೇವಸ್ಥಾನದ ಅರ್ಚಕ
ಹುಬ್ಬಳ್ಳಿ:
ದೇವಸ್ಥಾನದ ಆವರಣದಲ್ಲಿ ಬೆಳೆದಿದ್ದ ಕರ್ಕಿ (ಹುಲ್ಲು) ತುಳಿಯ ಬೇಡಿ ಎಂದ ಕರಿಯಮ್ಮ ದೇವಸ್ಥಾನದ ಅರ್ಚಕರ ಮೇಲೆ ಸ್ಥಳೀಯ ಜಡಿ ಕುಟುಂಬದ ಸದಸ್ಯರು ಹಲ್ಲೆ ನಡೆಸಿ ಅವಮಾನಿಸಿದ್ದರು ನಂತರ ಕೇಸು ಪೊಲಿಸರು ಬೇಡ ಅಂತಾ ರಾಜಿ ಮಾಡಿಸಿದ್ರು.
ಹೌದು ಹುಬ್ಬಳ್ಳಿಯ ಗೊಕುಲ ರಸ್ತೆಯಲ್ಲಿರುವ ಗ್ರೀನ ಗಾರ್ಡನ್ ಬಳಿಯ ಕರಿಯಮ್ಮ ದೇವಸ್ಥಾನದ ಅರ್ಚಕ ಮಂಜುನಾಥ ಹೆಬ್ಬಾರ ಅವರ ಮೇಲೆ ಸಂದೀಪ ಜಡಿ ಹಾಗೂ ರೇಶ್ಮಾ ಎಂಬುವರು ಹಲ್ಲೆ ನಡೆಸಿದ್ದರು.
ಆದ್ರೆ ಘಟನೆಗೆ ಸಂಬಂದಿಸಿದ ಹಾಗೆ ಎರಡು ಕಡೆಯವರು ಸಹ ಠಾಣೆಯ ಮೆಟ್ಟಿಲು ಎರಿರಲಿಲ್ಲ.
ಆಗಿದ್ದಿಷ್ಟು ದೇವಸ್ಥಾನದ ಅರ್ಚಕರು ಗಾರ್ಡನಲ್ಲಿರುವ ಕರಕಿಯನ್ನು ತುಳಿಯಬೇಡಿ ಅದನ್ನು ದೇವರಿಗೆ ಬಳಸುತ್ತೇವೆ ಎಂದು ಹೇಳಿದ್ದಕ್ಕೆ ಅರ್ಚಕರ ಜತೆಗೆ ವಾಗ್ವಾದಕ್ಕಿಳಿದ ಜಡಿ ಕುಟುಂಬದವರು
ದೇವಸ್ಥಾನ ಕ್ಕೆ ಬಂದು ಅರ್ಚಕರ ಮೇಲೆ ಹಲ್ಲೆ ನಡೆಸಿದ್ದಾರೆ.
ಅದೆಲ್ಲವೂ ದೇವಸ್ಥಾನದ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಆದ್ರೆ ಜಡಿ ಕುಟುಂಬಕ್ಕೆ ಸ್ಥಳಿಯ ಕಾರ್ಪೋರೆಟ್ ರ ಕುಮ್ಮಕ್ಕಿನಿಂದಲೆ ದೇವಸ್ಥಾನದ ಅರ್ಚಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪವನ್ನ
ಸ್ಥಳಿಯ ಕಾರ್ಪೋರೇಟರ್ ಸರಸ್ವತಿ ದೂಂಗಡಿಯವರ ಪತಿ ವಿನಾಯಕ ದೂಂಗಡಿ ಯವರು ಆರೋಪ ಮಾಡ್ತಾರೆ.
ಇ ನಡುವೆ ಪೋಲಿಸರ ಮದ್ಯಸ್ಥಿಕೆಯಲ್ಲಿ ಎಲ್ಲರನ್ನು ಸೇರಿಸಿ ಎರಡು ಕಡೆಯವರನ್ನ ರಾಜಿ ಮಾಡಿಸಿ ಮುಚ್ಚಳಿಕೆ ಬರಸ್ಕೊಂಡುಕಳಿಸಿದ್ದಾರಂತೆ.
ಆದ್ರೆ ಅವಮಾನಕ್ಕಿಡಾದ ಅರ್ಚಕರು ದೇವಸ್ಥಾನಕ್ಕೆ ಬರುತ್ತಿಲ್ವೆಂದು
ಸ್ಥಳಿಯ ಭಕ್ತರಿಂದ ಅರ್ಚಕರಿಗೆ ಮರಳಿ ದೇವಸ್ಥಾನ ಕ್ಕೆ ಬನ್ನಿ ಎಂದು ಒತ್ತಾಯ ಮಾಡುತ್ತಿದ್ದಾರಂತೆ ಹಲ್ಲೆಯಿಂದ ಮುಜುಗರಕ್ಕಿಡಾದ ಅರ್ಚಕರು ದೇವಸ್ಥಾನಕ್ಕೆ ಎಂದಿನಂತೆ ಬಂದು ಸೇವೆ ಸಲ್ಲಿಸ್ತಾರೆಯೆ ಎಂದು ಕಾದು ನೊಡಬೆಕಿದೆ.