ಛೋಟಾ ಮುಂಬೈ ಪೊಲೀಸರ ಧೈರ್ಯ ಮೆಚ್ಚಿದ ಡಿಜಿಪಿ ಪ್ರವೀಣ ಸೂದ್
ಬೆಂಗಳೂರು
ಹುಬ್ಬಳ್ಳಿಯಲ್ಲಿ ಹಾಡುಹಗಲೇ ಬ್ಯಾಂಕ್ ಒಂದರಿಂದ ಹಣ ದರೋಡೆ ಮಾಡಿಕೊಂಡು ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ಹಿಡಿದ ಪೊಲೀಸರಿಗೆ ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಕೊಪ್ಪಿಕರ ರಸ್ತೆಯಲ್ಲಿರುವ SBI bank ನಿಂದ ಒಟ್ಟು 6.39 ಲಕ್ಷ ನಗದು ಹಣ ದೋಚಿಕೊಂಡು ಪರಾರಿಯಾಗುತ್ತಿದ್ದ ಆರೋಪಿ.
ಈ ವೇಳೆಯಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಆರೋಪಿಯನ್ನು ಹಿಡಿದಿರುವ ಪೊಲೀಸರಿಬ್ಬರಿಗೆ ಅಭಿನಂದನೆಗಳು ಎಂದು ಪೊಲೀಸ್ ಮಹಾ ನಿರ್ದೇಶಕ ಪ್ರವೀಣ ಸೂದ್ ಟ್ವೀಟ್ ಮಾಡಿದ್ದಾರೆ.
ಮಂಜುನಾಥ ಹಾಗೂ ಉಮೇಶ ಬಂಗಾರಿ ಎನ್ನುವ ಪೊಲೀಸರು ಸಿನಿಮೀಯ ರೀತಿಯಲ್ಲಿ ಆರೋಪಿಯನ್ನು ಹಿಡಿದಿದ್ದಾರೆ.
ಆರೋಪಿ ಪ್ರವೀಣ ಅಪ್ಪಾಸಾಬ ಪಾಟೀಲ್ ವಿಜಯಪುರ ಆಗಿದ್ದು, ಮೈಸೂರಿನಲ್ಲಿ ಕೆಲಸ ಮಾಡಿಕೊಂಡಿದ್ದ.
ಡಿಜಿಪಿ ಪ್ರವೀಣ ಸೂದ್ ಅವರು ಹುಬ್ಬಳ್ಳಿ ಧಾರವಾಡ ಪೊಲೀಸ್ ಇಲಾಕೆ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಪ್ರಕರಣದ ಮಾಹಿತಿಯನ್ನು ಗೃಹಸಚಿವ ಅರಗ ಜ್ಞಾನೇಂದ್ರ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತಂದಿದ್ದಾರೆ.
ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾದ ಲಾಬೂರಾಮ್ ಅವರು ಇಬ್ಬರು ಪೊಲೀಸರಿಗೆ 25 ಸಾವಿರ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ.
ಇವರು ಮಾಡಿದ ಕೆಲಸ ಹುಬ್ಬಳ್ಳಿ- ಧಾರವಾಡದ ಕೀರ್ತಿ ರಾಜ್ಯಮಟ್ಟದಲ್ಲಿ ಹೆಚ್ಚುವಂತೆ ಮಾಡಿದೆ.
ಇವರ ಕಾರ್ಯಕ್ಕೆ ಪವರ್ ಸಿಟಿ ನ್ಯೂಸ್ ಮತ್ತೊಮ್ಮೆ ಅಭಿನಂದನೆ ಸಲ್ಲಿಸುತ್ತಾ ಹ್ಯಾಟ್ಸ ಆಫ್ ಹೇಳುತ್ತಿದೆ….