ಸ್ಥಳೀಯ ಸುದ್ದಿ
ಚುನಾವಣೆಗೆ ಸಜ್ಜಾದ ಕಾಂಗ್ರೆಸ್ ಪಕ್ಷ
ಧಾರವಾಡ
2023 ರ ಚುನಾವಣೆಗೆ 36 ಮಂದಿ ಹಿರಿಯ ಕಾಂಗ್ರೆಸ್ ನಾಯಕರ ಆಯ್ಕೆ ಸಮಿತಿಯನ್ನು ಒಳಗೊಂಡ ತಂಡವನ್ನು AICC ಅಂತಿಮಗೊಳಿಸಿದೆ.
ರಾಜ್ಯದ ಘಟಾನುಘಟಿ ನಾಯಕರು ಹಾಗೂ ಬಹುತೇಕ ಮಾಜಿ ಸಚಿವರುಗಳು ಈ ತಂಡದಲ್ಲಿ ಇದ್ದಾರೆ.
ಕಾಂಗ್ರೆಸ್ ನಾಯಕ ಕೆ.ಸಿ ವೇಣುಗೋಪಾಲ ಅವರು ಈ ಪಟ್ಟಿಯನ್ನು ಡಿಸೆಂಬರ್ 14 ಕ್ಕೆ ಅಂತಿಮಗೊಳಿಸಿ ಬಿಡುಗಡೆ ಮಾಡಿದ್ದಾರೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಈ 36 ಮಂದಿ ಒಳಗೊಂಡ ತಂಡದ ಸದಸ್ಯರು
ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೆ ತರಲು ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮಹತ್ವದ ಜವಾಬ್ದಾರಿ ಇವರ ಮೇಲಿದೆ.
ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರಾದ ಬಳಿಕ ಪಕ್ಷ ಸಂಘಟನೆಯ ಜೋತೆ ಜೋತೆಗೆ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಹೊತ್ತಿರುವ ವಿನಯ ಕುಲಕರ್ಣಿ ಅವರಿಗೂ ಇಲ್ಲಿ ಸ್ಥಾನ ಸಿಕ್ಕಿದ್ದು ಅಭಿಮಾನಿಗಳಿಗೆ ಖುಷಿ ತಂದಿದೆ.