ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಧಾರವಾಡ ತಾಲೂಕಿನಲ್ಲಿ ಕಾಂಗ್ರೆಸ ಜಯಭೇರಿ
ಧಾರವಾಡ
ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಜಿಲ್ಲಾ ಪ್ರವೇಶ ಮಾಡದಿದ್ದರೂ ಕೂಡ, ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕೈ ಪಕ್ಷದ ಅಧಿಕಾರ ಬಲಪಡಿಸುವಲ್ಲಿ ಯಶಸ್ವಿಯಾಗಿದ್ದು, ಕಾಂಗ್ರೆಸ್ ಜಯಭೇರಿ ಬಾರಿಸಿದೆ.
ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಇಂದು ನಡೆದ 11 ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ರ ಚುನಾವಣೆಯಲ್ಲಿ ಬಹುಪಾಲು ಅಧಿಕಾರ ಕಾಂಗ್ರೆಸ ಪಾಲಾಗಿದ್ದು, ಒಟ್ಟು 7 ಗ್ರಾಮ ಪಂಚಾಯತಿಗಳನ್ನು ಕೈ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಧಾರವಾಡ ತಾಲೂಕಿನ ಅಮ್ಮಿನಭಾವಿ, ಹಾರೋಬೆಳವಡಿ, ಮರೇವಾಡ, ಕೊಟಬಾಗಿ, ತೇಗೂರು,
ಉಪ್ಪಿನ ಬೆಟಗೇರಿ, ಬೇಲೂರು ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಉಳಿಸಿಕೊಂಡಿದೆ. ಅಧಿಕಾರ ಸ್ವೀಕರಿಸಿದ ಪಂಚಾಯತ್ ಪ್ರತಿನಿಧಿಗಳಿಗೆ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ, ಕಾಂಗ್ರೆಸ ಮುಖಂಡರಾದ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ ಹಾಗೂ ಶಾಸಕರ ಆಪ್ತ ಸಹಾಯಕರಾದ ಪ್ರಶಾಂತ ಕೆಕರೆ ಅಭಿನಂದನೆ ಸಲ್ಲಿಸಿದ್ದಾರೆ.
ಉಳಿದ ಕಡೆಗಳಲ್ಲಿ ಧಾರವಾಡ ತಾಲೂಕಿನ ಗರಗ, ನರೇಂದ್ರ, ಯಾದವಾಡ , ಕನಕೂರು, ಗ್ರಾಮ ಪಂಚಾಯತಿಗಳಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆ.