ಸ್ಥಳೀಯ ಸುದ್ದಿ
ಗ್ರಾಮೀಣ ಶಾಸಕರ ಮನೆಗೆ ಸಿಎಂ ಭೇಟಿ
ಧಾರವಾಡ
ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಮನೆಗೆ ಇಂದು ಸಂಜೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ರು.
ಧಾರವಾಡದ ಹೊಸ ಬಸ ನಿಲ್ದಾಣದ ಹತ್ತಿರ ಇರುವ ಅಮೃತ ದೇಸಾಯಿ ಮನೆಯಲ್ಲಿ
ಶಾಸಕ ಅರವಿಂದ ಬೆಲ್ಲದ, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ ಭಾಗಿಯಾಗಿದ್ದರು.
ಇದೇ ವೇಳೆ ಧಾರವಾಡ ಕೃಷ್ಣಾ ಹೋಟೆಲ್ ನಿಂದ ತರಿಸಲಾಗಿದ್ದ ಗಿರಿಮಿಟ್, ತುಪ್ಪದ ಅವಲಕ್ಕಿ ಹಾಗೂ ಮಿರ್ಚಿ ಸವಿದು ಸಿಎಂ ಬೊಮ್ಮಾಯಿ ತೆರಳಿದ್ರು.
ಇದೇ ವೇಳೆ ಅವಳಿನಗರದ ಜನಪ್ರೀಯ ಮೇಯರ್ ಈರೇಶ ಅಂಚಟಗೇರಿ ಸಿಎಂಗೆ ದೀಪಾವಳಿ ಶುಭಾಶಯ ಕೋರಿದ್ರು.