ಗ್ರಾಮೀಣ ಭಾಗದ ಕಾಂಗ್ರೆಸ್ ಬಲಪಡಿಸಲು ರಾಜಕೀಯ ಸೂತ್ರ ಹೆಣೆದಿರುವ :ಪಾಟೀಲ್
ಮೊನ್ನೇ ನಡೆದಿದ್ದ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪುರಸಭೆ ಚುನಾವಣೆಯ ಫಲಿತಾಂಶ ಇಂದು ಹೊರಬಂದಿದ್ದು 23 ಸ್ಥಾನಗಳ ಪೈಕಿ 13 ಸ್ಥಾನ ತನ್ನದಾಗಿಸಿಕೊಂಡಿರುವ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ.ಬಿಜೆಪಿ 4 ಸ್ಥಾನಕ್ಕೆ ಉಳಿದರೆ ಮತದಾರ ಜೆಡಿಎಸ್ ಸಹವಾಸ ಕೈ ಬಿಟ್ಟಂತಾಗಿದೆ.ಇನ್ನುಳಿದ 6ಪಕ್ಷೇತರರು ಸಹ ಕಾಂಗ್ರೆಸ್ ಬೆಂಬಲಿತರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಮಾತನಾಡಿರುವ ಕಾಂಗ್ರೆಸ್ ಪಕ್ಷದ ಧಾರವಾಡ ಜಿಲ್ಲಾ ಗ್ರಾಮೀಣ ಭಾಗದ ಅಧ್ಯಕ್ಷ ರಾದ ಅನೀಲ ಕುಮಾರ ಪಾಟೀಲ್, ಅಣ್ಣಿಗೇರಿ ಭಾಗದ ಮತದಾರರು ಹಾಗೂ ಪಕ್ಷದ ಕಾರ್ಯಕರ್ತರು ಈ ಬಾರಿಯ ಚುನಾವಣೆಯಲ್ಲಿ ಸಾಕಷ್ಟು ಭರವಸೆಯೊಂದಿಗೆ ಪಕ್ಷವನ್ನ ಬೆಂಬಲಿಸಿ ಗೆಲ್ಲಿಸಿದ್ದಾರೆ. ನಿಮ್ಮ ಭರವಸೆ ಉಳಿಸಿಕೊಳ್ಳುವ ಹೊಣೆ ಪಕ್ಷ ಹೊತ್ತಿದೆ. ಇದೊಂದು ಸುವರ್ಣ ಸಂದರ್ಭ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿನ ಗೆಲುವಿನ ಶುಭಾರಂಭಕ್ಕೆ ಅಣ್ಣಿಗೇರಿ ಪುರಸಭೆ ಚುಣಾವಣೆ ಅನುವು ಮಾಡಿಕೊಟ್ಟಿದೆ ಎಂದು ವಿಶ್ವಾಸ ವ್ಯಕ್ತ ಪಡಿಸುವ ಮೂಲಕ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮ್ಯನವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಅನೀಲ್ ಕುಮಾರ್ ಪಾಟೀಲ ಈ ಹಿಂದೆ ಅವಳಿನಗರದ ಮೇಯರ್ ಆಗಿಯೂ ಸಾಕಷ್ಟು ಜನಮನ್ನಣೆ ಗಳಿಸಿರುವ ಹಾಗೂ ಜಿಲ್ಲೆಯಾದ್ಯಂತ ಎಲ್ಲ ಸಂಧರ್ಭದಲ್ಲೂ ಪಕ್ಷದ ನಿಷ್ಠಾವಂತ ನಾಯಕನಾಗಿ ಜನ ಸೇವೆ ಸಲ್ಲಿಸಿರುವ ಹಾಗೂ ಫಿಟ್ ಆ್ಯಂಡ್ ಸೂಪರ್ ಸಿಂಗರ್ ಕೂಡ ಆಗಿರುವ ಇವರಿಗೆ ತಮ್ಮದೆ ಆದ ರಾಜಕೀಯ ಇಚ್ಛಾಶಕ್ತಿ ಇರುವುದರಿಂದಲೇ ಪಕ್ಷವನ್ನು ಗ್ರಾಮೀಣ ಮಟ್ಟದಲ್ಲಿ ಒಗ್ಗೂಡಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ.